ಬೆಂಗಳೂರು: ಬರದಿಂದ ಕಂಗೆಟ್ಟ ರೈತರ ಹಾಹಾಕಾರ ಒಂದೆಡೆಯಾದರೆ, ಹಾಲು ಉತ್ಪಾದಕರ ಸಬ್ಸಿಡಿಯನ್ನೂ ಕೊಡದೇ ದೋಖಾ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹಾಲಿನ ಸಬ್ಸಿಡಿಗೆ ಸಂಬಂಧಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಹಾಲು ಉತ್ಪಾದಕರ ಸಬ್ಸಿಡಿ ಹಣ ₹700 ಕೋಟಿ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ’ ಎಂದು ಪ್ರಶ್ನಿಸಿದ್ದಾರೆ.

‘ಕೃಷಿ ಅನುದಾನಕ್ಕೆ ಶೇ 32ರಷ್ಟು ಕತ್ತರಿ ಹಾಕಿದ್ದಾಯಿತು. ಈಗ ಹೈನುಗಾರರ ಸಬ್ಸಿಡಿಗೂ ಪಂಗನಾಮ. ಒಂದು ಲೀಟರ್ ಹಾಲಿನ ಸಬ್ಸಿಡಿಯನ್ನು ₹7 ಹೆಚ್ಚಿಸುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಸುಳ್ಳು ಹೇಳಿದ್ದೇ ಹೇಳಿದ್ದು. ಹೆಚ್ಚಿಸುವ ಮಾತಿರಲಿ, ಇದ್ದ ಸಬ್ಸಿಡಿಯನ್ನೂ (ಲೀಟರ್ ಹಾಲಿಗೆ ₹5) ಕೊಡದೇ 7 ತಿಂಗಳಿಂದ ಸತಾಯಿಸುತ್ತಿದೆ’ ಎಂದು ಗುಡುಗಿದ್ದಾರೆ.

‘ಗೋವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವೂ ಸಿಗುತ್ತಿಲ್ಲ. ಇಂಥ ಕಡು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಕೂಡಲೇ ರಾಜ್ಯ ಸರ್ಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.