ಬೆಂಗಳೂರು: ಲಂಡನ್ನಲ್ಲಿ ಇದೇ 19ರಂದು ನಡೆಯಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಶಿಕ್ಷಣ ಸಮಾವೇಶ, 26ರಿಂದ ದಾವೋಸ್ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಉನ್ನತ ಶಿಕ್ಷಣ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಪಾಲ್ಗೊಳ್ಳಲಿದ್ದಾರೆ.

ಇದೇ 18 ರಂದು ಲಂಡನ್ಗೆ ಪ್ರಯಾಣ ಬೆಳೆಸಲಿರುವ ಅವರು, ಅಲ್ಲಿಯೇ 22ರಿಂದ ನಡೆಯಲಿರುವ ವರ್ಲ್ಡ್ ಎಜುಕೇಷನ್ ಫೋರಂನ ಸಮಾವೇಶದಲ್ಲೂ ಭಾಗಿಯಾಗಲಿ ದ್ದಾರೆ.

ಕಾಮನ್ ವೆಲ್ತ್ ಶಿಕ್ಷಣ ಸಮಾ ವೇಶವನ್ನು ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವು ಏರ್ಪಡಿಸಿದೆ. ಈ ಸಮಾವೇಶದಲ್ಲಿ ‘21ನೇ ಶತಮಾನದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು ಹೇಗೆ?’ ಎನ್ನುವ ಬಗ್ಗೆ ಸಚಿವರು ವಿಷಯ ಮಂಡಿಸಲಿ ದ್ದಾರೆ.

ಇದಾದ ಬಳಿಕ ವರ್ಲ್ಡ್ ಎಜುಕೇಷನ್ ಫೋರಂನ ಸಮಾ ವೇಶದಲ್ಲಿ ಭಾಗಿಯಾಗ ಲಿರುವ ಅವರು ರಾಜ್ಯದ ವಿಶ್ವವಿದ್ಯಾಲಯಗಳು ವಿದೇಶಿ ಸಂಸ್ಥೆಗಳೊಂದಿಗೆ ಮಾಡಿಕೊಳ್ಳಬಹುದಾದ ಒಪ್ಪಂದಗಳು, ಟ್ವಿನ್ನಿಂಗ್ ಡಿಗ್ರಿ, ಬೋಧನೆ ಮತ್ತು ಸಂಶೋಧನಾ ವಿನಿಮಯಯ ಕುರಿತು ಚರ್ಚಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.