ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸುವ ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು, ತಮ್ಮ ಮೈತ್ರಿಕೂಟವನ್ನು 'INDIA'ಎಂದು ಕರೆದುಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'INDIA' ಎಂದರೆ 'ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ'. ಈ ಒಗ್ಗಟ್ಟು ಭಾರತದ ಗೌರವವನ್ನು ಎತ್ತಿ ಹಿಡಿಯಲ್ಲಿಕ್ಕಾಗಿ, ಪ್ರಜಾಪ್ರಭುತ್ವವನ್ನು ಸಾರ್ವಧಿಕಾರದಿಂದ ಮುಕ್ತಗೊಳಿಸುವುದಕ್ಕಾಗಿ, ಸಂವಿಧಾನವನ್ನು ಉಳಿಸಲಿಕ್ಕಾಗಿ, ದೇಶದ ಜನರ ಹಿತಕ್ಕಾಗಿ, ದ್ವೇಷ ಮತ್ತು ವಿಭಜನೆಯನ್ನು ತೊಲಗಿಸುವುದಕ್ಕಾಗಿ, ಸದೃಢ ಭಾರತದ ನಿರ್ಮಾಣಕ್ಕಾಗಿ ಎಂದಿದೆ.

INDIA ಒಕ್ಕೂಟವು ಸಭೆ ನಡೆಸಿದ ಬೆನ್ನಲ್ಲೇ ಬೆದರಿ ಹೋದ ಬಿಜೆಪಿ, ನೇತೃತ್ವ ವಹಿಸಿ 36 ಪಕ್ಷಗಳ ಎನ್ಡಿಎ ಸಭೆ ನಡೆಸಿದೆಯಂತೆ. ಇದು ಬಿಜೆಪಿಯ ಸೋಲಿನ ಆತಂಕವನ್ನು, ಕುಸಿದು ಹೋದ ಮೋದಿ ಇಮೇಜ್ ಅನ್ನು, ಬಿಜೆಪಿ ಮೇಲಿನ ಜನವಿರೋಧವನ್ನೂ ಸೂಚಿಸುತ್ತದೆ. ‘ಎಲ್ಲವೂ ಮೋದಿಯಿಂದ‘ ಎನ್ನುವ ಬಿಜೆಪಿಯ ಅಹಂ ಮಣ್ಣುಪಲಾಗಲಿದೆ! ಎಂದು ಕಾಂಗ್ರೆಸ್ ಟೀಕಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.