ಕಾರವಾರ:ಪಾಕಿಸ್ತಾನದ ಬಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆಯುದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ಸ್ಟೇಜ್ 1 ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ನೌಕಾನೆಲೆಯ ಮುಖ್ಯಸ್ಥ ಶಾಂತನು ಶರ್ಮಾ, ‘ನೌಕಾನೆಲೆಯಲ್ಲಿ ಭದ್ರತೆಯನ್ನು ಎಂದಿಗಿಂತ ಹೆಚ್ಚಿಸಲಾಗಿದೆ. ಹಲವು ಗೇಟ್‌ಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಅಗತ್ಯ ಕಾರ್ಯಗಳಿಗೆ ಬರುವವರನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ’ಎಂದು ತಿಳಿಸಿದರು.

ಶಿರಸಿಯಲ್ಲಿವಿಜಯೋತ್ಸವ

ಉಗ್ರರ ನೆಲೆಯ ಮೇಲೆ ಭಾರತದ ಸೈನಿಕರು ವೈಮಾನಿಕ ದಾಳಿ ನಡೆಸಿರುವ ವಿಷಯ ಬಿತ್ತರವಾಗುತ್ತಿದ್ದಂತೆ ಶಿರಸಿಯಲ್ಲಿ ಬಿಜೆಪಿ ಹಾಗೂ ಹಿಂದುತ್ವಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದವು.

ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಜನರಿಗೆ ಸಿಹಿ ಹಂಚಿದ ಕಾರ್ಯಕರ್ತರು, ಉಗ್ರವಾದದ ವಿರುದ್ಧ ಭಾರತ ದಿಟ್ಟ ಉತ್ತರ ನೀಡಿದೆ ಎಂದುಸಂಭ್ರಮಿಸಿದರು.ನಗರದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.