ಶಕ್ತಿಗಿಂತ ಯುಕ್ತಿಮೇಲು ಎನ್ನುವ ಮನೋಭಾವವನ್ನು ಮಕ್ಕಳಲ್ಲಿ ಬಿತ್ತುತ್ತಿದ್ದಾರೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಹೇಶ್ ಎಂ. ಹುಟ್ಟುತ್ತಲೇ ಬಡತನ, ಜೊತೆಯಾದ ಅಂಗವೈಕಲ್ಯ ಮತ್ತು ಮಾರ್ಗದರ್ಶನ ಕೊರತೆಯಂತಹ ಸಮಸ್ಯೆಗಳನ್ನು ಮೀರಿ ಬದುಕು ಕಟ್ಟಿಕೊಂಡ ಮಹೇಶ್, ಎಂಜಿನಿಯರ್ ಆಗಿದ್ದರೂ, ಗಣಿತ ವಿಷಯ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಗಣಿತ ಎಂದರೆ ತಲೆನೋವು, ಕಬ್ಬಿಣದ ಕಡಲೆ ಎಂಬ ಮಾತುಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ಗಣಿತ ತುಂಬಾ ಸುಲಭ ಎನ್ನುವುದನ್ನು ಮಾಡಿ ತೋರಿಸುತ್ತಾ, ಮಕ್ಕಳಿಗೆ ಗಣಿತ ವಿಷಯದ ಮೇಲೆ ಆಸಕ್ತಿ–ಪ್ರೀತಿ ಉಕ್ಕುವಂತೆ ಮಾಡಿದ್ದಾರೆ. ತಾವು ಚಿಕ್ಕವರಿದ್ದಾಗ, ತಮ್ಮ ಶಿಕ್ಷಕರು ಗಣಿತವನ್ನು ಹೀಗೆ ಬೋಧಿಸಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಿದ್ದ ಮಹೇಶ್, ತಮ್ಮ ಕನಸನ್ನು ತಾವೇ ನನಸು ಮಾಡಿಕೊಂಡು ಮಕ್ಕಳಿಗೆ ಗಣಿತದ ವಿವಿಧ ಕೌಶಲಗಳನ್ನು ಹೇಳಿಕೊಡುತ್ತಿದ್ದಾರೆ. ಮಕ್ಕಳಿಗೆ ಲೆಕ್ಕದ ಪ್ರಜ್ಞೆ ಮೂಡಿಸುವ ‘ಪ್ರಜ್ಞಾ ಗಣಿತ’ ಎಂಬ ಸಂಸ್ಥೆ ನಡೆಸುತ್ತಿದ್ದಾರೆ. ಅವರ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.