ಕೋಲಾರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸಿದ್ದರಾಮಯ್ಯ ಅವರನ್ನು ಸೋಲಿಸಿ, ವಿದಾಯ ಹೇಳಿ ಕಳುಹಿಸುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಜೆಡಿಎಸ್‌ನ ಇಂಚರ ಗೋವಿಂದರಾಜು ಅವರು ಹೇಳಿದರು.

‘75ನೇ ಜನ್ಮದಿನದ ನೆಪದಲ್ಲಿ ದಾವಣಗೆರೆಯಲ್ಲಿ ಆಯೋಜಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ವಿದಾಯ ಹೇಳುವ ಸಮಾರಂಭ ಎಂಬುದಾಗಿ ಈಗ ಚರ್ಚೆ ನಡೆಯುತ್ತಿದೆ. ಕೋಲಾರಕ್ಕೆ ಬಂದರೆ ಅವರನ್ನು ಇಲ್ಲಿನ ಜನ ಸೋಲಿಸಿ ಬೀಳ್ಕೊಡುಗೆ ನೀಡಿ ಕಳುಹಿಸುತ್ತಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವರ್ತೂರು ಪ್ರಕಾಶ್ ಅವರಿಗೆ ತಿರುಗೇಟು ನೀಡಿ, ‘ಈಗಾಗಲೇ 3 ಬಾರಿ ಬಿಜೆಪಿಗೆ ಹೋಗಿ ಬಂದಿದ್ದಾರೆ. ಸದ್ಯ ಕೋಲಾರ ಕ್ಷೇತ್ರದಲ್ಲಿ ಬಿಜೆಪಿಗೆ ಯಾರೂ ಇರಲಿಲ್ಲ. ರೊಟ್ಟಿ ಹಳಸಿತ್ತು, ನಾಯಿ ಹಸಿದಿತ್ತು ಎಂಬಂತೆ ಆ ಪಕ್ಷಕ್ಕೆ ಒಬ್ಬರು ಬೇಕಾಗಿತ್ತು’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.