ಬೆಂಗಳೂರು: ಸೌರಮಾನ ಯುಗಾದಿ ವಿಷು ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡುವ ಮೂಲಕ ರಾಜ್ಯದ ಜನತೆಗೆ ಶುಭಕೋರಿದ್ದಾರೆ.

'ಪೊಸ ವರ್ಸೊದ ಪೊಸ ಗಲಿಗೆಗ್
ಪೊಸ ಬುಲೆಕ್ ಲೆನ ಕಣಿ ದೀದ್
ಪೊಲ್ಸುದ ತುಡರ್ ಪೊತ್ತಾದ್
ಬಿಸು-ಕಣಿಕ್ ಎಡ್ಡೆಪ್ಪು ಬಾಮ್ಯೊಂದುಲ್ಲೆ...

ಮಹಾ ಜನತೆಗ್ ಬಿಸು-ವಿಷು ಪರ್ಬೊದ ಎಡ್ಡೆಪ್ಪುಲು' ಎಂದು ಸಿಎಂ ಬೊಮ್ಮಾಯಿ ಅವರು ಟ್ವೀಟ್‌ನಲ್ಲಿ ತುಳುವಿನಲ್ಲಿ ಜನತೆಗೆ ಯುಗಾದಿಗೆ ಶುಭ ಹಾರೈಸಿದ್ದಾರೆ.

ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ವಿಷು ಹಬ್ಬ ಆಚರಿಸಲಾಗುತ್ತಿದೆ.

ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಇಂದು ಹೊಸ ವರ್ಷಾಚರಣೆ ನಡೆಯುತ್ತದೆ.

ಹೊಸ ಬೆಳೆಯನ್ನು ದೇವರಿಗೆ ಕಣಿ ಅರ್ಪಿಸಿ, ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ನೂತನ ವರ್ಷವನ್ನು ಸ್ವಾಗತಿಸುವುದು ವಿಷು ಹಬ್ಬದ ವಿಶೇಷತೆಯಾಗಿದೆ. ತುಳುವಿನಲ್ಲಿ ‘ಬಿಸು ಪರ್ಬ‘ ಎಂದೂ, ಕಾಸರಗೋಡಿನಲ್ಲಿ ‘ವಿಷು ಹಬ್ಬ‘ ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.