ಬೆಂಗಳೂರು: ರಾಜ್ಯದಾದ್ಯಂತ ಹೋಟೆಲ್ಗಳಲ್ಲಿ ಎಲ್ಲ ಆಹಾರಗಳ ದರವನ್ನು ಶೇ 10ರವರೆಗೆ ಹೆಚ್ಚಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಪರಿಷ್ಕೃತ ದರ ಈ ವಾರದಿಂದಲೇ ಜಾರಿಯಾಗಲಿದೆ.

ಕಾಫಿ, ಟೀ, ಹಾಲು, ಉಪಾಹಾರ, ಊಟ, ಚಾಟ್ಸ್ ಸೇರಿದಂತೆ ಎಲ್ಲ ಆಹಾರ ದರ ಶೇ 10ರಷ್ಟು ಹೆಚ್ಚಾಗಲಿದೆ. ಪರಿಷ್ಕೃತ ದರ ಜಾರಿಯಾದ ನಂತರ ಹೋಟೆಲ್ಗಳಲ್ಲಿ ಅಂದಾಜು ₹500 ಮೊತ್ತದ ಆಹಾರ ಖರೀದಿಸಿದರೆ, ₹550 ಪಾವತಿಸಬೇಕು. ₹10ರ ಕಾಫಿಗೆ ₹12 ನೀಡಬೇಕಾಗುತ್ತದೆ.

ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ

‘ಹೋಟೆಲ್ಗಳಲ್ಲಿ ಶೇ 10ಕ್ಕಿಂತ ದರ ಹೆಚ್ಚಿಸಬಾರದು. ಗುಣಮಟ್ಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು. ದರ ಏರಿಕೆ ಮಿತಿಯ ಬಗ್ಗೆ ಸಂಘ ಸಲಹೆಯಷ್ಟೇ ನೀಡಿದೆ’ ಎಂದು ರಾಜ್ಯ ಹೋಟೆಲ್ಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

‘ಹೋಟೆಲ್ ಉದ್ಯಮದ ಉಳಿವಿಗಾಗಿ ಕನಿಷ್ಠ ಶೇ 10ರವರೆಗೆ ದರ ಏರಿಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ‘ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ’ದ ಅಧ್ಯಕ್ಷಪಿ.ಸಿ.ರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.