ಬೆಂಗಳೂರು: ‘ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿರುವುದು ನ್ಯಾಯಸಮ್ಮತವಾಗಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಪ್ರಕರಣ ಗಮನಿಸಿದರೆ, ರಾಜಕೀಯ ಪಿತೂರಿ ಕಾಣಿಸುತ್ತಿದೆ. ಜೊತೆಗೆ, ಇದೊಂದು ಷಂಡ್ಯಂತ್ರ’ ಎಂದರು.

‘ಸಿಐಡಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹೋಗಿದ್ದ ಯಡಿಯೂರಪ್ಪ ಅವರು ಉತ್ತರ ಕೊಟ್ಟಿದ್ದಾರೆ. ಸನ್ನಡತೆಯಿಂದ ನಡೆದುಕೊಂಡಿದ್ದಾರೆ. ಇವರಿಗೆ ನ್ಯಾಯಾಲಯ ಜಾಮೀನು ನೀಡಿರುವುದು ನ್ಯಾಯಸಮ್ಮತವಾಗಿದೆ. ಮುಂದಿನ ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ಅವರು ವಿಜಯಶಾಲಿಯಾಗುವ ವಿಶ್ವಾಸವಿದೆ’ ಎಂದು ಅವರು ತಿಳಿಸಿದರು.

‘ಯಡಿಯೂರಪ್ಪ ವಿರುದ್ದ ಈ ಹಿಂದೆಯೂ ಹಲವು ಪ್ರಕರಣಗಳನ್ನು ದಾಖಲಿಸಿದ್ದರು. ಎಲ್ಲ ಪ್ರಕರಣಗಳಲ್ಲಿಯೂ ಅವರು ಸುಪ್ರೀಂಕೋರ್ಟ್ಗೆ ಹೋಗಿ ಗೆದ್ದಿದ್ದಾರೆ. ಅವೆಲ್ಲ ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದೆ’ ಎಂದರು.
.ಬಿಎಸ್ವೈ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕಾರಣ: ಯೋಗೇಶ್ವರ್.ಬಿಎಸ್ವೈ ವಿರುದ್ಧ ಪೋಕ್ಸೊ ಪ್ರಕರಣ; ಕಾಂಗ್ರೆಸ್ನಿಂದ ದ್ವೇಷದ ರಾಜಕಾರಣ: ಶೆಟ್ಟರ್.ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಬಿಎಸ್ವೈ ಬಂಧನಕ್ಕೆ ಸಿಐಡಿ ಶೋಧ.BSY ವಿರುದ್ಧ ಪೋಕ್ಸೊ ಪ್ರಕರಣ; ಷಡ್ಯಂತ್ರದ ಹಿಂದೆ ಪ್ರಭಾವಿ ಸಚಿವರು: ರೇಣುಕಾಚಾರ್ಯ.ಪೋಕ್ಸೊ ಪ್ರಕರಣ: ಯಡಿಯೂರಪ್ಪ ಬಂಧನ ಆದೇಶಕ್ಕೆ ಹೈಕೋರ್ಟ್ ತಡೆ.ವಾಲ್ಮೀಕಿ ನಿಗಮದ ಹಗರಣ ಮುಚ್ಚಿಹಾಕಲು ಪೋಕ್ಸೊ ಪ್ರಕರಣಕ್ಕೆ ಜೀವ: ಬಿ.ವೈ.ರಾಘವೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.