ಬೆಂಗಳೂರು:ಕರ್ನಾಟಕ ಮಾಧ್ಯಮ ಅಕಾಡೆಮಿ 2018ನೇ ಸಾಲಿನ ವಿಶೇಷ ಪ್ರಶಸ್ತಿ, ಜೀವಮಾನ ಸಾಧನೆ ಹಾಗೂ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ರಾಜ್ಯದ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಪ್ರಕಟಿಸಿದೆ.

‘ಪ್ರಜಾವಾಣಿ’ಯ ಆರು ಹಾಗೂ ‘ಡೆಕ್ಕನ್ ಹೆರಾಲ್ಡ್’ನ ಒಬ್ಬರಿಗೆ ಪ್ರಶಸ್ತಿ ಲಭಿಸಿವೆ.

ಅಕಾಡೆಮಿಯ ಅಧ್ಯಕ್ಷ ಎಂ.ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ವಿಶೇಷ ಪ್ರಶಸ್ತಿಗೆ ₹50 ಸಾವಿರ ನಗದು, ವಾರ್ಷಿಕ ಪ್ರಶಸ್ತಿಗೆ ₹25 ಸಾವಿರ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. 2018ನೇ ಸಾಲಿಗೆ 51 ಮಂದಿ ಪತ್ರಕರ್ತರನ್ನು ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜೀವಮಾನದ ಸಾಧನೆಗೆ ವಿಶೇಷ ಪ್ರಶಸ್ತಿ ಹಿರಿಯ ಪತ್ರಕರ್ತರಾದ ಧರ್ಮಾವರಪು ಬಾಲಾಜಿ ಅವರಿಗೆ ಸಂದಿದೆ.

2018ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ‘ಆಂದೋಲನ ಪ್ರಶಸ್ತಿ’, ‘ಅಭಿಮಾನಿ ಪ್ರಶಸ್ತಿ’, ’ಅರಗಿಣಿ ಪ್ರಶಸ್ತಿ’, ‘ಮೈಸೂರು ದಿಗಂತ ಪ್ರಶಸ್ತಿ’, ‘ಮೂಕನಾಯಕ ಪ್ರಶಸ್ತಿ’ಗಳಿಗೂ ಆಯ್ಕೆ ಮಾಡಲಾಗಿದೆ. ಇದು ಪ್ರಶಸ್ತಿ ಜತೆ ₹10 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿ ತಿಳಿಸಿದೆ.

ವಾರ್ಷಿಕ ಪ್ರಶಸ್ತಿ ಪುರಸ್ಕೃತ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಿಬ್ಬಂದಿ:

* ‘ಡೆಕ್ಕನ್ ಹೆರಾಲ್ಡ್’: ಹುಬ್ಬಳ್ಳಿ ಬ್ಯೂರೊದ ಮುಖ್ಯ ವರದಿಗಾರರಾದ ರಾಜು ವಿಜಾಪುರ.

‘ಪ್ರಜಾವಾಣಿ’
* ಹಿರಿಯ ಪತ್ರಕರ್ತ ಪ್ರೇಮಕುಮಾರ್ ಹರಿಯಬ್ಬೆ

* ಛಾಯಾಗ್ರಾಹಕ ವಿಶ್ವನಾಥ ಸುವರ್ಣ

* ಮೈಸೂರು ಬ್ಯೂರೊ ಮುಖ್ಯಸ್ಥರಾದ ಮರಿಯಪ್ಪ ಕೆ.ಜೆ.

* ದಾವಣಗೆರೆ ಬ್ಯೂರೊ ಮುಖ್ಯ ವರದಿಗಾರ ಪ್ರಕಾಶ ಕುಗ್ವೆ

* ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ

* ಹಿರಿಯ ಉಪಸಂಪಾದಕಿ ಮಂಜುಶ್ರೀ ಕಡಕೋಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.