ಬೆಂಗಳೂರು: ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಪಕ್ಷದ ಹಿರಿಯ ಮುಖಂಡರು ಹರಿಹಾಯ್ದ ಬೆನ್ನಲ್ಲೇ ಅವರ ಪತ್ನಿ ಟಬು ರಾವ್, ಪತಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ಪತಿಯನ್ನು ಟೀಕಿಸಿರುವ ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ಅಸಮಾಧಾನ ತೋಡಿಕೊಂಡಿದ್ದು, ‘ಯುವ ಸಮುದಾಯಕ್ಕೆ ಇನ್ನಷ್ಟು ಅವಕಾಶ ನೀಡಬೇಕು’ ಎಂದು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಪಕ್ಷದಲ್ಲಿಯುವ ಸಮುದಾಯವನ್ನು ಮುನ್ನೆಲೆಗೆ ತರುವ ತುರ್ತು ಅಗತ್ಯವಿದ್ದು, ಹಿರಿಯರು ಮುಚ್ಚುಮರೆ ಮಾಡದೆ ಬೆಳೆಯುತ್ತಿರುವ ಯುವ ನಾಯಕತ್ವ ಬೆಂಬಲಿಸಬೇಕು. ಅವರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

‘ಪಕ್ಷದಲ್ಲಿ ಅತಿರೇಕದ ವರ್ತನೆ ಕಂಡು ಬರುತ್ತಿದೆ. ಪಕ್ಷದಿಂದ ಸ್ಪರ್ಧಿಸಿದವರನ್ನೇ ಕಾಂಗ್ರೆಸ್ ನಾಯಕರು ಸೋಲಿಸು
ತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ವಿಕೃತ ಮನಸ್ಸಿನ ಕೆಲವರು ಹಿರಿಯರ ಬಳಿ ಇಲ್ಲ ಸಲ್ಲದ್ದನ್ನು ಹೇಳುತ್ತಾರೆ. ಅವರು ನಂಬುತ್ತಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಇಂಥ ವಾತಾವರಣ ಹೆಚ್ಚಾಗಿ ಕಾಣುತ್ತದೆ’ ಎಂದಿದ್ದಾರೆ.

‘ಇದು ವೈಯಕ್ತಿಕ ಅಭಿಪ್ರಾಯ. ಪಕ್ಷ ಅಥವಾ ಯಾರನ್ನೋ ಉದ್ದೇಶಿಸಿ ಬರೆದಿದ್ದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.