ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೈಸೂರು ಚಲೋ’ ಪಾದಯಾತ್ರೆ: ಸಿ.ಎಂ ರಾಜೀನಾಮೆ ನೀಡದಿದ್ದರೆ ಹೋರಾಟ ತೀವ್ರ

ಎರಡನೇ ದಿನದ ಪಾದಯಾತ್ರೆಗೆ ತಮಟೆ ಬಾರಿಸುವ ಮೂಲಕ ಚಾಲನೆ
Published : 4 ಆಗಸ್ಟ್ 2024, 23:41 IST
Last Updated : 4 ಆಗಸ್ಟ್ 2024, 23:41 IST
ಫಾಲೋ ಮಾಡಿ
Comments
ಪಾದಯಾತ್ರೆಯಲ್ಲೂ ದಲಿತರು ರೈತರ ಅಸ್ಮಿತೆಗೆ ಆದ್ಯತೆ ನೀಡಲಾಗಿದೆ. ಬಿಡದಿಯಲ್ಲಿ ತಮಟೆ ಬಾರಿಸುವ ಮೂಲಕ ಪಾದಯಾತ್ರೆ ಸಾಗಿದರೆ ಮಂಡ್ಯದಲ್ಲಿ ಬಾರುಕೋಲು ಬೀಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ಎನ್. ರವಿಕುಮಾರ್ ವಿಧಾನ ಪರಿಷತ್‌ ಸದಸ್ಯ. 
ಜೆಡಿಎಸ್‌ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಯಾತ್ರೆಯ ಯಶಸ್ವಿಗೆ ಎರಡೂ ಪಕ್ಷಗಳು ಶ್ರಮಿಸಲಿವೆ.
ಸುರೇಶ್‌ ಬಾಬು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆ.10ರ ಒಳಗೆ ರಾಜೀನಾಮೆ ನೀಡಬೇಕು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು
ವಿ.ಸುನಿಲ್ ಕುಮಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಎರಡನೇ ದಿನ ಕಾಣದ ‘ನಾಯಕರು’
ಮೊದಲ ದಿನದ ಪಾದಯಾತ್ರೆಯಲ್ಲಿ ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಇದ್ದರು. ಎರಡನೇ ದಿನ ಎರಡೂ ಪಕ್ಷಗಳ ಬಹುತೇಕ ಶಾಸಕರು ನಾಯಕರು ಕಾಣಿಸಲಿಲ್ಲ. ಯಾತ್ರೆ ಆರಂಭದ ವೇಳೆ ಕೆಲವರು ಕಾಣಿಸಿಕೊಂಡರೂ ಪಾದಯಾತ್ರೆಯಲ್ಲಿ ಸಾಗಲಿಲ್ಲ. ಎರಡನೇ ದಿನದ ಪಾದಯಾತ್ರೆ ಬಿಡದಿಯಿಂದ ಆರಂಭವಾಗಿ ಕೆಂಗಲ್‌ವರೆಗೆ 22 ಕಿ.ಮೀ ಸಾಗಿತು. ಎಂದಿಗಿಂತ ತುಸು ಹೆಚ್ಚಾಗಿದ್ದ ಬಿಸಿಲಿಗೆ ಜನರು ಬಸವಳಿದರು. ಧಗೆ ನೀಗಿಸಿಕೊಳ್ಳಲು ರಸ್ತೆ ಬದಿ ಹಂಚುತ್ತಿದ್ದ ಸೌತೆಕಾಯಿ ನೀರಿನ ಬಾಟಲ್‌ ಪಡೆಯಲು ಮುಗಿಬಿದ್ದರು. ಭಾನುವಾರವೂ ಜೆಡಿಎಸ್‌ ಕಾರ್ಯಕರ್ತರ ಸಂಖ್ಯೆ  ಕಡಿಮೆ ಇತ್ತು. ಮೊದಲ ದಿನ ಇರದಿದ್ದ ಜೆಡಿಎಸ್‌ ಬಾವುಟಗಳು ಬಿಜೆಪಿ ಬಾವುಟಗಳ ಮಧ್ಯೆ ರಾರಾಜಿಸುತ್ತಿದ್ದವು.
ಪಾದಯಾತ್ರೆ ಮಧ್ಯೆ ‘ಕಾರು’ಗಳ ದರ್ಬಾರ್ 
ಪಾದಯಾತ್ರೆಯಲ್ಲಿ ನೂರಾರು ಕಾರುಗಳು ಸಾಗಿದವು. ಮುಖಂಡರು ಪಾದಯಾತ್ರೆಯಲ್ಲಿ ನಡೆದರೆ ಅವರು ಬಂದಿದ್ದ ಕಾರುಗಳು ಹಿಂಬಾಲಿಸಿದವು. ಕೆಲವು ಭಾಗಗಳಲ್ಲಿ ಕಾರುಗಳ ಸಂಖ್ಯೆ ಹೆಚ್ಚಿದ್ದರಿಂದ ಪಾದಯಾತ್ರೆ ಮಾಡುತ್ತಿದ್ದವರು ಕಿರಿಕಿರಿ ಅನುಭವಿಸಿದರು.  ದಾರಿಯುದ್ದಕ್ಕೂ ವಿಜಯೇಂದ್ರ ನಿಖಿಲ್‌ ಕುಮಾರಸ್ವಾಮಿಗೆ ಹಾರ ಹಾಕಿ ಸ್ಥಳೀಯರು ಸ್ವಾಗತಿಸಿದರು. ಸೆಲ್ಫಿಗೆ ಮುಗಿಬೀಳುತ್ತಿದ್ದರು.ಇದರಿಂದ ಪಾದಯಾತ್ರೆಯ ವೇಗ ತಗ್ಗಿತು.
ಭೀಮನ ಅಮಾವಾಸ್ಯೆ ಮತ್ತು ಮಹಿಳೆಯರು
ಬಿಜೆಪಿ–ಜೆಡಿಎಸ್‌ ಹಮ್ಮಿಕೊಂಡಿರುವ ಮೈಸೂರು ಚಲೋ ಯಾತ್ರೆಯಲ್ಲಿ ಭಾನುವಾರ ಮಹಿಳೆಯರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇದ್ದರು. ‘ಇಂದು ಭೀಮನ ಅಮವಾಸ್ಯೆ. ಶ್ರಾವಣವೂ ಆರಂಭವಾಗುತ್ತಿದೆ. ಮನೆಯಲ್ಲಿ ಕೆಲಸ ಹೆಚ್ಚಾಗುತ್ತವೆ. ಭಾಗವಹಿಸುವಿಕೆ ಸಹಜವಾಗಿ ಕಡಿಮೆ ಇರುತ್ತದೆ’ ಎಂದು ಶಿವಮೊಗ್ಗ ನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್ ಹೇಳಿದರು. ಪಾದಯಾತ್ರೆ ಮಾರ್ಗದಲ್ಲಿ ಮಹಿಳೆಯರಿಗೆ ಅಗತ್ಯ ಶೌಚಾಲಯ ಇಲ್ಲದ್ದೂ ಸಮಸ್ಯೆಯಾಗಿದೆ ಎಂದು ರಾಮನಗರದ ಅಶ್ವಿನಿ ಕುಮಾರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT