ಮಂಗಳೂರು: ‘ನನ್ನ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ‘ಪ್ರಜಾವಾಣಿ’ಯ ಸಾಹಿತ್ಯ ಪುರವಣಿ ಮುಕ್ತಛಂದದಲ್ಲಿ ಪ್ರಕಟವಾದ ‘ಮಹಾಭಾರತ ಅನುಸಂಧಾನ’ ಅಂಕಣ ಬರಹಗಳ ಸಂಗ್ರಹವೇ ‘ಭಾರತ ಯಾತ್ರೆ’ ಕೃತಿ’ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

‘ನನ್ನ ಬರಹಗಳನ್ನು ಓದಿ ಅನೇಕ ಓದುಗರು ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಅದೇ ನನಗೆ ಬಹಳ ಖುಷಿಕೊಟ್ಟ ವಿಚಾರ. ಸಾಹಿತ್ಯ ಅಕಾಡೆಮಿಯು ನನ್ನ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ’ ಎಂದು ಪ್ರತಿಕ್ರಿಯಿಸಿದರು.

ಲಕ್ಷ್ಮೀಶ ತೋಳ್ಪಾಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು.

ಉಪನ್ಯಾಸಕ್ಕೆ ನಿಂತರೆ, ಕೇಳುಗರು ತಾಸುಗಟ್ಟಲೆ ಕದಲದೇ ತಮ್ಮ ಮಾತುಗಳನ್ನಾಲಿಸುವಂತೆ ಮಾಡಬಲ್ಲ ಪ್ರಖರ ವಾಗ್ಮಿ. ಕೇಳುಗರನ್ನು ಆಳವಾದ ಚಿಂತನೆಗೆ ಒಳಗೊಳ್ಳುವಂತೆ ಮಾಡಬಲ್ಲ ಆಧ್ಯಾತ್ಮಿಕ ಜಿಜ್ಞಾಸೆಗಳ ಪ್ರತಿಪಾದಕರು.

ಭಗವದ್ಗೀತೆಯ ಕುರಿತಾದ ‘ಮಹಾಯುದ್ಧಕ್ಕೆ ಮುನ್ನ’, ಭಾಗವತದ ಕುರಿತಾದ ಬರಹಗಳನ್ನೊಳಗೊಂಡ
‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’, ‘ಆನಂದ ಲಹರೀ’, ‘ಮಾತಿಗೆ ಮುನ್ನ’, ‘ಭಕ್ತಿಯ ನೆಪದಲ್ಲಿ’ ತಾಳ ಮದ್ದಲೆ ಕುರಿತ ‘ಭವ ತಲ್ಲಣ’, ‘ಬಾಳು– ಸಾವು ಒಡ್ಡುತ್ತಿರುವ ಆಮಿಷ’ ಮೊದಲಾದವು ಅವರ ಪ್ರಕಟಿತ ಕೃತಿಗಳು. ಅವರು ಕೃಷಿಕ ಮತ್ತು ತಾಳಮದ್ದಲೆ ಅರ್ಥಧಾರಿಯಾಗಿಯೂ ಪ್ರಸಿದ್ಧರು.
.ಲಕ್ಷ್ಮೀಶ ತೋಳ್ಪಾಡಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.