ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಈ.ಸಿ. ನಿಂಗರಾಜ ಹಾಗೂ ಅವರ ಪತ್ನಿ ಒಟ್ಟು ₹3.36 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ವಾಸಕ್ಕೆ ಸ್ವಂತ ಮನೆ ಇಲ್ಲ.

ಅವರ ಬಳಿ ಒಟ್ಟು ₹2.32 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹1.04 ಕೋಟಿ ಮೌಲ್ಯದ ಚರಾಸ್ತಿ ಇದೆ. ಅಭ್ಯರ್ಥಿ ನಿಂಗರಾಜ ಬಳಿ ಕೇವಲ ₹25 ಸಾವಿರ ನಗದು ಇದ್ದು, ಓಡಾಟಕ್ಕೆ ಇನೋವಾ ಕ್ರಿಸ್ಟಾ ಹಾಗೂ ಮಾರುತಿ ಸ್ವಿಫ್ಟ್ ಡಿಸೈರ್ ಕಾರ್ ಹೊಂದಿದ್ದಾರೆ. 125 ಗ್ರಾಂ ಚಿನ್ನಾಭರಣವಿದೆ. ಅವರ ಪತ್ನಿ ಎಂ. ಜಯಶ್ರೀ ಬಳಿ ಹುಂಡೈ ಐ10 ಕಾರ್, 495 ಗ್ರಾಂ ಚಿನ್ನ ಹಾಗೂ 2 ಸ್ಕೂಟರ್ ಇದೆ. 495 ಗ್ರಾಂ ಚಿನ್ನ ಹಾಗೂ 4 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.

ನಿಂಗರಾಜ ಬಳಿ ₹1.15 ಕೋಟಿ ಮೌಲ್ಯದ 5 ನಿವೇಶನ ಹಾಗೂ ಅವರ ಮಡದಿ ಬಳಿ ₹1.17 ಕೋಟಿ ಮೌಲ್ಯದ 3 ನಿವೇಶನಗಳಿವೆ. ನಿಂಗರಾಜ ವಿವಿಧ ಬ್ಯಾಂಕುಗಳಲ್ಲಿ ₹37 ಲಕ್ಷ ಸಾಲ ಮಾಡಿದ್ದಾರೆ.

ನಿಂಗರಾಜ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದಲ್ಲಿ ಪಿಎಚ್ಡಿ ಪಡೆದಿದ್ದಾರೆ. ಅವರ ಮಡದಿ ಮೈಸೂರು ವಿ.ವಿ. ಕಾನೂನು ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.