ಬೆಂಗಳೂರು: ‘ಹಿಂದೂಸ್ತಾನಿ ಸಂಗೀತದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಜನಸಾಮಾನ್ಯರನ್ನು ತಲುಪಬೇಕು. ಅದಕ್ಕಾಗಿ ವಿಚಾರ ಸಂಕಿರಣಗಳು ಹಾಗೂ ಸಂವಾದಗಳನ್ನು ಹೆಚ್ಚಾಗಿ ಆಯೋಜಿಸಬೇಕು’ ಎಂದು ಮೈಸೂರಿನಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆತಿಳಿಸಿದರು.

ವಿಶ್ವ ಸಂಗೀತ ದಿನದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗವು ಆನ್‌ಲೈನ್ ಮೂಲಕ ಸೋಮವಾರ ಹಮ್ಮಿಕೊಂಡಿದ್ದ ‘ಸಂಗೀತ ವಿಚಾರಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

‘ಸಂಗೀತ ಮತ್ತು ಯೋಗ ಭಾರತೀಯ ಸಂಸ್ಕೃತಿಯ ಮೂಲ ಬೇರುಗಳು. ಇತ್ತೀಚಿನ ದಿನಗಳಲ್ಲಿ ಸಂಗೀತ ಹಾಗೂ ಯೋಗವೂ ಚಿಕಿತ್ಸೆಗಳಾಗಿ ಬದಲಾಗಿದ್ದು, ಇವುಗಳಿಂದ ಜನ ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ‘ಸಂಗೀತ ಹಾಗೂ ಯೋಗ ದಿನಗಳನ್ನು ಒಂದೇ ದಿನ ಆಚರಿಸಲಾಗುತ್ತಿದೆ. ಸಂಗೀತ ಮನಸ್ಸಿನ ಆರೋಗ್ಯವಾದರೆ, ಯೋಗ ಶರೀರದ ಆರೋಗ್ಯ.ಸಂಗೀತ ನಾರದರಿಂದ ಬಂದರೂ ಅದಕ್ಕೆ ಗ್ರೀಕ್‌ನಿಂದ ಅಡಿಪಾಯ ಸಿಕ್ಕಿದೆ. ಸಂಗೀತದಿಂದ ಮನಸ್ಸಿನ ದುಗುಡಗಳು ದೂರವಾಗಿ, ನೆಮ್ಮದಿ ನೆಲೆಸುತ್ತದೆ’ ಎಂದು ಹೇಳಿದರು.

ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್,‘ ವಿಶ್ವ ಸಂಗೀತ ದಿನವನ್ನುದೇಶದಲ್ಲಿ ಮೊದಲು ಆಚರಿಸುತ್ತಿರಲಿಲ್ಲ. ಇದು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ’ ಎಂದರು.

ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥೆ ಪ್ರೊ.ಹಂಸಿನಿ ನಾಗೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.