ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಸಂಬಂಧ ವಿವಿಧ ಇಲಾಖೆ ಮತ್ತು ನಿಗಮಗಳ 9 ಅಧಿಕಾರಿಗಳ ಮನೆ ಮತ್ತು ಇತರೆಡೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ನಗ–ನಗದು, ಆಸ್ತಿಪತ್ರಗಳು ಪತ್ತೆಯಾಗಿವೆ. ಬೆಳಗಾವಿ, ಹಾವೇರಿ, ದಾವಣಗೆರೆ, ಬೀದರ್, ಮೈಸೂರು ಮತ್ತು ಧಾರವಾಡದಲ್ಲಿ ದಾಳಿ ನಡೆದಿದೆ. ಒಂಬತ್ತು ಅಧಿಕಾರಿಗಳ ಮನೆ, ಸಂಬಂಧಿಕರು ಮತ್ತು ಆಪ್ತರ ಮನೆ ಸೇರಿ ಒಟ್ಟು 40 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಹಾವೇರಿ ಹಿರೇಕೆರೂರು ಉಪವಿಭಾಗದ ಅಧಿಕಾರಿ ಕಾಶೀನಾಥ್ ಅವರು ₹9 ಲಕ್ಷ ನಗದನ್ನು ಗಂಟು ಕಟ್ಟಿ ಮನೆಯಿಂದ ಹೊರಗೆ ಎಸೆದಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.