ಬಾಗಲಕೋಟೆ: ’ಬಸವಣ್ಣನ ವಚನಗಳಲ್ಲಿ ಲಿಂಗದೇವ ಬದಲಿಗೆ ಕೂಡಲಸಂಗಮದೇವ ಅಂಕಿತವನ್ನೇ ನಾವು ಬಳಸಲಿದ್ದೇವೆ. ಕೆಲವರು ಇನ್ನೂ ಲಿಂಗದೇವ ಬಳಕೆ ಮಾಡುತ್ತಿದ್ದು, ಅದಕ್ಕೂ ನಮಗೂ ಸಂಬಂಧವಿಲ್ಲ‘ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಸವಧರ್ಮ ಪೀಠದಿಂದ ಹಿಂದಿನ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಪ್ರಕಟಿಸಿದ್ದ ವಚನದೀಪ್ತಿ ಪುಸ್ತಕದಲ್ಲಿ ಲಿಂಗದೇವ ಅಂಕಿತ ಬಳಸಲಾಗಿತ್ತು. ರಾಜ್ಯ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆ ಕ್ರಮವನ್ನು ನಂತರ ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ.

‘ಅದನ್ನು ಒಪ್ಪಿಕೊಂಡು ವಚನದೀಪ್ತಿ ಪುಸ್ತಕದ ಮರು ಮುದ್ರಣ ನಿಲ್ಲಿಸಿದ್ದಮಾತೆ ಮಹಾದೇವಿ, ಲಿಂಗದೇವ ಅಂಕಿತ ಬಳಸುವುದಿಲ್ಲ ಎಂದು 2017ರ ಸೆಪ್ಟೆಂಬರ್ 21ರಂದು ಸ್ಪಷ್ಟನೆ ನೀಡಿದ್ದರು. ಅದನ್ನೇ ನಾವೂ ಮುಂದುವರೆಸಿಕೊಂಡು ಬಂದಿದ್ದೇವೆ‘ ಎಂದರು.

’ಆದರೆ ಕೆಲವರು ಈಗಲೂ ಲಿಂಗದೇವ ಅಂಕಿತವನ್ನೇ ಬಳಸುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಬಸವಧರ್ಮ ಪೀಠಕ್ಕೆ ಸಂಬಂಧವಿಲ್ಲ. ಲಿಂಗದೇವ ಬಳಕೆಯಿಂದ ಲಿಂಗಾಯತ ಧರ್ಮಸ್ವತಂತ್ರ ಹೋರಾಟಕ್ಕೂ ಹಿನ್ನಡೆ ಆಗಿದೆ. ಅದನ್ನು ತಪ್ಪಿಸಲು ಹಾಗೂ ನ್ಯಾಯಾಲಯದ ತೀರ್ಪು ಗೌರವಿಸಲು ಈ ಸ್ಪಷ್ಟನೆ ನೀಡುತ್ತಿದ್ದೇನೆ‘ ಎಂದು ಹೇಳಿದರು.

ಬಸವಧರ್ಮ ಪೀಠದ ಅಧೀನ ಸಂಸ್ಥೆಗಳಲ್ಲೂ ಇನ್ನು ಮುಂದೆ ಕೂಡಲಸಂಗಮ ದೇವ ಅಂಕಿತವನ್ನೇ ಬಳಸಲು ಸುತ್ತೋಲೆ ಹೊರಡಿಸಲಾಗುವುದು. ಲಿಂಗದೇವ ಪದ ಬಳಕೆ ಪರ ಇರುವ ಭಕ್ತರ ಮನವೊಲಿಕೆ ಮಾಡಲಾಗುವುದು ಎಂದು ತಿಳಿಸಿದರು.

ಬಸವಧರ್ಮ ಪೀಠದ ಉಪಾಧ್ಯಕ್ಷರಾದ ಮಹಾದೇಶ್ವರ ಸ್ವಾಮೀಜಿ, ಕೂಡಲಸಂಗಮದ ಹಿರಿಯರಾದ ಜಿ.ಜಿ.ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.