ಮಂಡ್ಯ: ಚೆನ್ನೈ ಮೂಲದ ಖಾಸಗಿ ವಿಶ್ವವಿದ್ಯಾಲಯದಿಂದ ಹಣ ಕೊಟ್ಟು ಗೌರವ ಡಾಕ್ಟರೇಟ್ (ಗೌಡಾ) ಪದವಿ ಖರೀದಿಸುವ ಪ್ರಕ್ರಿಯೆ ಮುಂದುವರಿದಿದೆ. ಮೈಸೂರಿನ ಕಲಾಮಂದಿರದಲ್ಲಿ ಶನಿವಾರ 153 ಮಂದಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಮೈಸೂರಿನ 60ಕ್ಕೂ ಹೆಚ್ಚು ಜನರು ‘ಗೌಡಾ’ ಖರೀದಿಸಿದ್ದಾರೆ ಎಂಬ ವಿಷಯ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಲಾವಿದರು ಪದವಿ ಪಡೆದಿದ್ದಾರೆ.

ಇದನ್ನೂ ಓದಿ...ಕಾಂಚಾಣದ ಕರಾಮತ್ತು: ವರ್ಷದಲ್ಲಿ ಮಂಡ್ಯ ಜಿಲ್ಲೆಗೆ 350 ಗೌರವ ಡಾಕ್ಟರೇಟ್!

ಮಂಡ್ಯದಿಂದ ಮತ್ತೆ 25 ಮಂದಿಗೆ ಪದವಿ ಲಭಿಸಿದೆ. ‘ಗೌಡಾ’ ಜೊತೆಗೆ ಹಲವರು ಡಾ.ಅಬ್ದುಲ್ ಕಲಾಂ ಅಂತರರಾಷ್ಟ್ರೀಯ ಸೇವಾ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನಗರದ ಹಲವು ಬೀದಿಗಳಲ್ಲಿ ಪದವಿ ಪಡೆದವರ ಫ್ಲೆಕ್ಸ್ ಹಾಕಿ, ಅಭಿನಂದನೆಗಳ ಮಹಾಪೂರ ಹರಿಸಲಾಗಿದೆ. ಅಭಿನಂದನಾ ಕಾರ್ಯಕ್ರಮಗಳೂ ಸಿದ್ಧಗೊಳ್ಳುತ್ತಿವೆ.

ಅಂತರ್ಜಾಲದಲ್ಲಿ ಅರ್ಜಿ: ‘ಗೌರವ ಡಾಕ್ಟರೇಟ್ ಪದವಿ ಕೊಡಿಸುವಲ್ಲಿ ಏಜೆಂಟರು ಅವ್ಯವಹಾರ ನಡೆಸಿದ್ದರಿಂದ, ಖಾಸಗಿ ವಿಶ್ವವಿದ್ಯಾಲಯವು ಪದವಿ ಪ್ರದಾನಕ್ಕೆ ಹೊಸ ಮಾರ್ಗ ಹುಡುಕಿಕೊಂಡಿದೆ. ಅದಕ್ಕಾಗಿ ವೆಬ್ ತಾಣವೊಂದನ್ನು ರೂಪಿಸಿದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಪದವಿ ನೀಡಲಾಗುತ್ತಿದೆ’ ಎಂದು ‘ಗೌಡಾ’ ಏಜೆಂಟರೊಬ್ಬರು ತಿಳಿಸಿದರು.

ರಹಸ್ಯವಾಗಿ ಆಯೋಜನೆ: ಹಣ ಕೊಟ್ಟು ‘ಗೌಡಾ’ ಖರೀದಿ ಕುರಿತು ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟಗೊಂಡ ನಂತರ ಕಾರ್ಯಕ್ರಮ ಆಯೋಜಕರು ಶನಿವಾರ ರಹಸ್ಯವಾಗಿ ಪದವಿ ಪ್ರದಾನ ಸಮಾರಂಭ ಆಯೋಜಿಸಿದ್ದರು.

ಇದನ್ನೂ ಓದಿ...‘ಗೌಡಾ’ಗಳಿಂದ ಪಾರ್ಟಿಗಳ ಕಿಕ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.