ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡಿದ್ದ ರಾಜ್ಯ ಕೋಟಾದ ವೈದ್ಯಕೀಯ ಸೀಟುಗಳನ್ನು ರದ್ದು ಮಾಡಿಕೊಳ್ಳಲು ಸೆ. 26ರವರೆಗೂ ಅವಕಾಶ ನೀಡಲಾಗಿದೆ.

ಅಖಿಲ ಭಾರತಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ನಿರ್ಧರಿಸಿದ 107 ವಿದ್ಯಾರ್ಥಿಗಳೂ ಸೇರಿದಂತೆ ವಿವಿಧ ಕೋರ್ಸ್ಗಳ 206 ವಿದ್ಯಾರ್ಥಿಗಳು ಎರಡನೇ ಸುತ್ತಿನ ಸೀಟು ಹಂಚಿಕೆ ವೇಳೆ ರದ್ದು ಮಾಡಿಕೊಂಡಿದ್ದರು.

‘ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಪರಿಗಣಿಸಿ ಅವಧಿ ವಿಸ್ತರಿಸಲಾಗಿದೆ. ಸೀಟು ರದ್ದು ಮಾಡಿಕೊಳ್ಳುವವರು ಕೆಇಎ ಕಚೇರಿಗೆ ಹಾಜರಾಗಬೇಕು. ಸೀಟು ರದ್ದು ಮಾಡಿಕೊಳ್ಳುವವರಿಗೆ ಮೊದಲು ಒಂದು ವರ್ಷದ ಶುಲ್ಕ ಹಾಗೂ ₹10 ಸಾವಿರ ದಂಡ ವಿಧಿಸಲಾಗುತ್ತಿತ್ತು. ಇದೇ ಮೊದಲ ಬಾರಿ ₹10 ಸಾವಿರ ದಂಡ ಮಾತ್ರ ಪಡೆಯಲಾಗುತ್ತಿದೆ. ಒಂದು ವರ್ಷದ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.