ಮಕ್ಕಳು ಕೇಳಿದರೂ ಮೊಟ್ಟೆ ಕೊಡುತ್ತಿಲ್ಲ!
ಕೆಲ ಶಾಲೆಗಳಲ್ಲಿ ಬೇಯಿಸಿದ ಮೊಟ್ಟೆಗೆ ಮಕ್ಕಳು ಬೇಡಿಕೆ ಸಲ್ಲಿಸಿದ್ದರೂ, ಅಂತಹ ಮಕ್ಕಳಿಗೆ ಮೊಟ್ಟೆ ನೀಡದೇ ಚಿಕ್ಕಿ, ಬಾಳೆ ಹಣ್ಣು ವಿತರಿಸಲಾಗುತ್ತಿದೆ ಎಂದು ಅಜೀಂ ಪ್ರೇಮ್‌ಜಿ ಫೌಂಡೇಷನ್ ಪ್ರತಿನಿಧಿಗಳು ಸಿದ್ಧಪಡಿಸಿದ ಮೌಲ್ಯಮಾಪನ ಅಧ್ಯಯನ ವರದಿ ಹೇಳಿದೆ. ಚಿಕ್ಕಿ, ಬಾಳೆಹಣ್ಣನ್ನೇ ಹೆಚ್ಚು ಸೇವಿಸುವ ಮಕ್ಕಳಿರುವ ಕೆಲ ಶಾಲೆಗಳಲ್ಲಿ ಶೇ 30ಷ್ಟು ಮಕ್ಕಳು ಚಿಕ್ಕಿ, ಬಾಳೆ ಹಣ್ಣಿಗೆ ಬೇಡಿಕೆ ಸಲ್ಲಿಸಿದ್ದಾರೆ. ಆದರೂ, ಅವರಿಗೆ ಮೊಟ್ಟೆ ಸಿಗುತ್ತಿಲ್ಲ. ಅನಿವಾರ್ಯವಾಗಿ ಅವರು ಶಿಕ್ಷಕರು ನೀಡಿದ ಚಿಕ್ಕಿ, ಬಾಳೆಹಣ್ಣನ್ನೇ ಸೇವಿಸುತ್ತಿದ್ದಾರೆ. ನಿಯಮದಂತೆ ಚಿಕ್ಕಿ ಪ್ರಮಾಣ ಪ್ರತಿ ವಿದ್ಯಾರ್ಥಿಗೆ 35 ಗ್ರಾಂನಿಂದ 40 ಗ್ರಾಂ ಇರಬೇಕು. ಬಹುತೇಕ ಶಾಲೆಗಳಲ್ಲಿ ಇದು 30 ಗ್ರಾಂಗಿಂತ ಕಡಿಮೆ ಇದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಬಾಳೆಹಣ್ಣು ನೀಡಬೇಕು. ಆದರೂ, ಕೇವಲ ಚಿಕ್ಕಿ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.