ತುಮಕೂರು: ಲೋಕಸಭಾ ಚುನಾವಣೆಯಲ್ಲಿ ನನ್ನದು ಮತ್ತು ನನ್ನ ಮಗನ ಫೋನ್ ಟ್ಯಾಪ್ ಮಾಡಲಾಗಿತ್ತು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಈಗ ಬಹಿರಂಗಪಡಿಸಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ' ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಪೋನ್ ಟ್ಯಾಪ್ ಮಾಡುತ್ತಿರುವ ಬಗ್ಗೆ ಗೊತ್ತಾಯಿತು. ಆ ಬಗ್ಗೆ ಹೆಚ್ಚು ಮಹತ್ವ ಕೊಟ್ಟಿರಲಿಲ್ಲ. ನಂತರವೂ ಅದನ್ನು ಮುಂದುವರಿಸಲಾಯಿತು ಎಂದರು.

ನನಗೆ ಪೋನ್ ಬಂದಾಗಲೇ ಧ್ವನಿ, ಸಂಭಾಷಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಗೊತ್ತಾಗುತ್ತಿತ್ತು. ಇದೆಲ್ಲ ಟ್ಯಾಪ್ ನ ಲಕ್ಷಣಗಳು. ಸೂಕ್ತ ದಾಖಲೆ ಇಲ್ಲದ್ದರಿಂದ ದೂರು ಕೊಟ್ಟಿರಲಿಲ್ಲ ಎಂದರು.

ಫೋನ್ ಟ್ಯಾಪ್ ಮಾಡುವುದು ಅಪರಾಧ. ಈ ರೀತಿ ಮಾಡುವುದರಿಂದ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ. ಈ ಕದ್ದಾಲಿಕೆ ಅಂತ್ಯ ಆಗಬೇಕಾದರೆ ಸಿಬಿಐ ತನಿಖೆ ಮಾಡಲೇಬೇಕು ಎಂದು ಒತ್ತಾಯಿಸಿದರು.

ಎಚ್.ಡಿ.ಕುಮಾರಸ್ವಾಮಿ ಅಂಥವರು ಮುಖ್ಯಮಂತ್ರಿಯಾಗಿದ್ದು ದುರ್ದೈವ. ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ಹೇಳುತ್ತಾರಲ್ಲ. ಆರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.