ಬೆಂಗಳೂರು: ಕನ್ನಡಿಗರ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯಾಗಿರುವ ‘ಪ್ರಜಾವಾಣಿ’ಯ ಓದುಗರ ಬಳಗವು 71.77 ಲಕ್ಷಕ್ಕೆ ಏರಿರುವುದನ್ನು ಓದುಗರ ಸಮೀಕ್ಷೆ (ಇಂಡಿಯನ್ ರೀಡರ್‌ಶಿಪ್ ಸರ್ವೆ–ಐಆರ್‌ಎಸ್) ದೃಢಪಡಿಸಿದೆ.

ದಿ ಪ್ರಿಂಟರ್ಸ್ (ಮೈಸೂರು) ಲಿಮಿಟೆಡ್‌ನ ಹೆಮ್ಮೆಯ ಪ್ರಕಟಣೆಗಳಾಗಿರುವ, ‘ಪ್ರಜಾವಾಣಿ’ ಮತ್ತು ಇಂಗ್ಲಿಷ್ ದಿನಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ನ ಓದುಗರ ಸಂಖ್ಯೆಯು ಕ್ರಮವಾಗಿ 7.42 ಲಕ್ಷ ಮತ್ತು 1.53 ಲಕ್ಷ ಹೆಚ್ಚಳಗೊಂಡಿದೆ. ಶೇಕಡಾವಾರು ಪ್ರಮಾಣವು ಕ್ರಮವಾಗಿ ಶೇ 12 ಮತ್ತು 16ರಷ್ಟು ಏರಿಕೆಯಾಗಿದೆ.

ಈ ಸಮೀಕ್ಷೆ ಪ್ರಕಾರ, 2017ರ ಕೊನೆಯ ಮೂರು ತ್ರೈಮಾಸಿಕಗಳು ಮತ್ತು 2019ರ ಮೊದಲ ತ್ರೈಮಾಸಿಕದಲ್ಲಿ ‘ಪ್ರಜಾವಾಣಿ’ಯ ಒಟ್ಟಾರೆ ಓದುಗರ ಸಂಖ್ಯೆಯು 64.35 ಲಕ್ಷದಿಂದ ಈಗ 71.77 ಲಕ್ಷಕ್ಕೆ ಮತ್ತು ‘ಡೆಕ್ಕನ್ ಹೆರಾಲ್ಡ್’ನ ಓದುಗರ ಸಂಖ್ಯೆಯು 11.19 ಲಕ್ಷಕ್ಕೆ ಹೆಚ್ಚಳಗೊಂಡಿದೆ ಎಂಬುದು ಸ್ಪಷ್ಟವಾಗಿದೆ.

ಮುದ್ರಣ ಮಾಧ್ಯಮದ ಜನಪ್ರಿಯತೆ: ದೇಶದಾದ್ಯಂತ ಮುದ್ರಣ ಮಾಧ್ಯಮದ ಬೆಳವಣಿಗೆಯು ಅಂದರೆ ದಿನಪತ್ರಿಕೆಗಳ ಓದುಗರ ಸಂಖ್ಯೆಯು ನಿರಂತರವಾಗಿ ಏರುಗತಿಯೇ ಇರುವುದೂ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಈ ಅವಧಿಯಲ್ಲಿ ಒಟ್ಟಾರೆ 1.8 ಕೋಟಿ ಹೊಸ ಓದುಗರ ಸೇರ್ಪಡೆಯಿಂದ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳ ಪತ್ರಿಕೆಗಳ ಓದುಗರ ಸಂಖ್ಯೆಯು 40.7 ಕೋಟಿಗಳಿಂದ 42.4 ಕೋಟಿಗೆ ಏರಿಕೆಯಾಗಿದೆ. ಓದುಗರ ಹೆಚ್ಚಳವು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾಗಿ ಹೆಚ್ಚಳಗೊಂಡಿರುವುದು ಇನ್ನೊಂದು ವಿಶೇಷತೆಯಾಗಿದೆ.

ಇದರ ಜತೆ, ಜತೆಯಲ್ಲಿ ಸುದ್ದಿಗಾಗಿ ಇಂಟರ್‌ನೆಟ್ ನೆಚ್ಚಿಕೊಂಡವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಳಗೊಳ್ಳುತ್ತಿದೆ. ಮೀಡಿಯಾ ರಿಸರ್ಚ್ ಯೂಸರ್ಸ್ ಕೌನ್ಸಿಲ್ (ಎಂಆರ್‌ಯುಸಿ) ಪ್ರಕಟಿಸಿರುವ 2019ರ ಮೊದಲ ತ್ರೈಮಾಸಿಕ ‘ಐಆರ್‌ಎಸ್’ ವರದಿಯಲ್ಲಿ ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದ ಈ ಉತ್ತೇಜನಕಾರಿ ವಿವರಗಳು ಈ ಸಮೀಕ್ಷೆಯಲ್ಲಿ ಇವೆ.

ಇನ್ನು ಮುಂದೆ ‘ಐಆರ್‌ಎಸ್’, ಪತ್ರಿಕೆಗಳ ಓದುಗರ ಸಂಖ್ಯೆ ಕುರಿತ ಮಾಹಿತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಕಟಿಸಲಿದೆ. ಇದು ಮುದ್ರಣ ಮಾಧ್ಯಮ ಉದ್ಯಮದ ಬಹುದಿನಗಳ ಬೇಡಿಕೆಯಾಗಿತ್ತು.

‘ಈ ಸಮೀಕ್ಷೆಯು ಮಾರುಕಟ್ಟೆಯ ನೈಜ ಚಿತ್ರಣ ಒದಗಿಸಿದ್ದು, ‘ಐಆರ್‌ಎಸ್’ನ ಕಠಿಣ ಸ್ವರೂಪದ ವಿಶ್ಲೇಷಣೆ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ದೃಢೀಕರಿಸುತ್ತದೆ’ ಎಂದು ‘ಎಂಆರ್‌ಯುಸಿ’ ಅಧ್ಯಕ್ಷ ಆಶೀಶ್ ಭಾಸಿನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.