ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಬಿರುಸಿನ ಮಳೆ ಸುರಿಯಿತು. ಮಳೆ–ಗಾಳಿಯಿಂದ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.

ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆ ಬಿದ್ದಿದೆ.

ಉಪ್ಪಿನಂಗಡಿ ಸಮೀಪದ ಕಜೆಕ್ಕಾರು ಅಂಬೇಡ್ಕರ್ ಕಾಲೊನಿಯಲ್ಲಿ ಎರಡು ಮನೆಗಳು ಕುಸಿದಿದ್ದು. ಮನೆಯೊಳಗಿದ್ದ ಮಕ್ಕಳಿಬ್ಬರು ಪಾರಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಶುಕ್ರವಾರ ಮುಳುಗಡೆಯಾಗಿದ್ದ ಜಿಲ್ಲೆಯ 16 ಸೇತುವೆಗಳ ಮೇಲೆ ಮತ್ತೆ ಒಂದು ಅಡಿ ನೀರು ಏರಿಕೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮಲೆನಾಡು ಭಾಗದ ಹಲವೆಡೆ 10 ಸೆಂಟಿ ಮೀಟರ್ಗೂ ಅಧಿಕ ಮಳೆಯಾಗಿದೆ. ಹೇಮಾವತಿ ಮತ್ತು ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ನರಸಿಂಹರಾಜಪುರ ತಾಲ್ಲೂಕಿನ ಕರ್ಕೆಶ್ವರ ಗ್ರಾಮದ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ.

ಭಾರಿ ಗಾಳಿ –ಮಳೆಯಿಂದಾಗಿ ಶನಿವಾರ ಬೆಳಿಗ್ಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಎಂಐಎ) ವಿಮಾನ ಇಳಿಸುವುದಕ್ಕೆ ಸಮಸ್ಯೆ ಎದುರಾಯಿತು. ಬೆಂಗಳೂರಿನಿಂದ ಬಂದ ವಿಮಾನವೊಂದನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮತ್ತು ಮುಂಬೈನಿಂದ ಬಂದ ವಿಮಾನವೊಂದನ್ನು ಬೆಂಗಳೂರಿನಲ್ಲಿ ಇಳಿಸಬೇಕಾಯಿತು ಎಂದು ಎಂಐಎ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.