ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕ್ವಾರಂಟೈನ್‌ಗಳು ವಾಸವಿರುವ ಮನೆಗಳಿಂದ ಕಸವನ್ನು ಪ್ರತ್ಯೇಕವಾಗಿ ಬಯೊ ಮೆಡಿಕಲ್ ತ್ಯಾಜ್ಯದ ಮಾದರಿಯಲ್ಲಿ ವಿಲೇವಾರಿ ಮಾಡಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುಂದಾಗಿದೆ.

ಕ್ವಾರೆಂಟೈನ್‍ಗಳಿರುವ ಮನೆಗಳ ಕಸವನ್ನು ಬಯೊಮೆಡಿಕಲ್ ತ್ಯಾಜ್ಯವೆಂದೇ ಪರಿಗಣಿಸಲಾಗುತ್ತಿದೆ. ಹುಬ್ಬಳ್ಳಿಯ ತಾರಿಹಾಳದಲ್ಲಿ ಇರುವ ರಿಯೋ ಗ್ರೀನ್ ಎನ್‍ವಿರಾನ್ ಇಂಡಿಯಾ ಸಂಸ್ಥೆಯ ಈ ತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿದೆ.

‘ಸಂಸ್ಥೆಯ ಕರ್ಮಚಾರಿಗಳು ವೈಯಕ್ತಿಕ ಸುರಕ್ಷಾ ಕವಚಗಳನ್ನು ಧರಿಸಿ ವಿಶೇಷ ಕಸ ಸಂಗ್ರಹಣ ಟಿಪ್ಪರ್‍ಗಳಲ್ಲಿ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಘಟಕದಲ್ಲಿ ಸುಡುತ್ತಾರೆ. ಇದರಿಂದ ಗೃಹ ತ್ಯಾಜ್ಯಗಳ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಯಲಾಗುತ್ತಿದೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್ ಶ್ರೀಧರ ತಿಳಿಸಿದ್ದಾರೆ.

‘ಪಾಲಿಕೆಯ ಪೌರ ಕಾರ್ಮಿಕರಿಗೆ ಕ್ವಾರಂಟೈನ್ ಮನೆಗಳಿಂದ ಕಸ ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ. ರಿಯೋ ಗ್ರೀನ್ ಸಂಸ್ಥೆಯ ಕರ್ಮಚಾರಿಗಳಿಗೆ ಮಾತ್ರ ಕ್ವಾರಂಟೈನ್ ಮನೆಗಳ ವಿಳಾಸ, ದೂರವಾಣಿ ಹಾಗೂ ವಾಟ್ಸ್ ಆ್ಯಪ್ ಸಂಖ್ಯೆ ನೀಡಲಾಗಿದೆ. ಆರೋಗ್ಯ ನಿರೀಕ್ಷಕರು ಕ್ವಾರಂಟೈನ್‍ಗಳಿರುವ ಮನೆಗಳ ಮಾಹಿತಿ ನೀಡಿ ಸಂಸ್ಥೆಗೆ ನೆರವಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪಾಲಿಕೆ ಪರಿಸರ ಎಂಜಿನಿಯರ್ ನಯನಾ ಪ್ರತಿಕ್ರಿಯಿಸಿ ‘ಹುಬ್ಬಳ್ಳಿಯಲ್ಲಿ 20 ಹಾಗೂ ಧಾರವಾಡದಲ್ಲಿ 16 ಕ್ವಾರಂಟೈನ್ ಮನೆಗಳಿದ್ದು, ಆ ಮನೆಗಳ ವಿಳಾಸವನ್ನು ಪಾಲಿಕೆಯ ವಲಯ ಕಚೇರಿ ಅಧಿಕಾರಿಗಳಿಗೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಕ್ವಾರಂಟೈನ್‌ಗಳ ಮನೆಯಿಂದ ಫೋನ್ ಹಾಗೂ ವಾಟ್ಸ್ ಆ್ಯಪ್ ಸಂದೇಶದ ಮೂಲಕ ಮಾಹಿತಿ ಪಡೆದು ಸಂಸ್ಥೆಯ ಸಿಬ್ಬಂದಿ ಕಸ ಸಂಗ್ರಹಿಸಲು ಹೋಗುತ್ತಾರೆ. ಈ ಕೆಲಸಕ್ಕೆ ನಿಯೋಜನೆಯಾಗಿರುವ ಕರ್ಮಚಾರಿಗಳನ್ನು ಹೊರತುಪಡಿಸಿ ಬೇರೆ ಯಾರೂ ವಿಲೇವಾರಿ ಘಟಕಕ್ಕೆ ಹೋಗದಂತೆ ಕಟ್ಟಿನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಸಂಸ್ಥೆಯ ಸದಸ್ಯ ಅನಿರುದ್ಧ ಬೆಂಗೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.