ಬೆಂಗಳೂರು: ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿರುವ ದಕ್ಷಿಣ ವಿಭಾಗದ ಪೊಲೀಸರು, ನೈಜೀರಿಯಾದ ಐವರು ಪ್ರಜೆಗಳನ್ನು ಬಂಧಿಸಿದ್ದಾರೆ.

‘ಡ್ರಗ್ಸ್ ಮಾರಾಟದ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ವಿ.ವಿ.ಪುರ ಹಾಗೂ ಜಯನಗರ ಪೊಲೀಸರು ಇತ್ತೀಚೆಗೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ₹ 8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ್ ಮಾಹಿತಿ ನೀಡಿದರು.

ಅಕ್ರಮ ವಾಸ: ‘ನೈಜೀರಿಯಾದ ಲಾವ್ರೆನ್ಸೆ ಇಜೆನ್ವೊಕೆ ಅಲಿಯಾಸ್ ಪೀಟರ್ ಹಾಗೂ ಚೊಕ್ವೊನೆಜಿಮ್ ಒನ್ವೆಕಚಿ ಅಲಿಯಾಸ್ ಬ್ರೈಟ್ ಎಂಬುವವರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಇಬ್ಬರು, ವೀಸಾ ಅವಧಿ ಮುಗಿದರೂ ವಾಪಸು ಹೋಗಿರಲಿಲ್ಲ. ಮೂರು ವರ್ಷಗಳಿಂದ ಅಕ್ರಮವಾಗಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.

‘ಹೊರ ದೇಶ ಹಾಗೂ ಹೊರ ರಾಜ್ಯಗಳ ಪೆಡ್ಲರ್ ಜೊತೆ ಆರೋಪಿಗಳು ಒಡನಾಟ ಹೊಂದಿದ್ದರು. ಅವರ ಮೂಲಕ ಎಂಡಿಎಂಎ, ಕೊಕೇನ್ ಖರೀದಿಸಿ ತಂದು ನಗರಕ್ಕೆ ಮಾರುತ್ತಿದ್ದರು. ಐಟಿ–ಬಿಟಿ ಕಂಪನಿಗಳ ಕೆಲ ಉದ್ಯೋಗಿಗಳು, ಶಾಲಾ–ಕಾಲೇಜಿನ ಕೆಲ ವಿದ್ಯಾರ್ಥಿಗಳು ಆರೋಪಿಗಳ ಬಳಿ ಡ್ರಗ್ಸ್ ಖರೀದಿ ಮಾಡುತ್ತಿದ್ದರು’ ಎಂದರು.

‘ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ವೇಳೆ ಪೀಟರ್ ಹಾಗೂ ಬ್ರೈಟ್ ಸಿಕ್ಕಿಬಿದ್ದಿದ್ದರು. ಬಿದರಹಳ್ಳಿ ಬಳಿ ತಾವು ವಾಸವಿದ್ದ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದರು. ಮನೆ ಮೇಲೆ ದಾಳಿ ಮಾಡಲಾಗಿದೆ. ಆರೋಪಿಗಳಿಂದ 1 ಕೆ.ಜಿ 850 ಗ್ರಾಂ ಬಿಳಿ ಎಂಡಿಎಂಎ, 1 ಕೆ.ಜಿ 150 ಗ್ರಾಂ ಕಂದು ಎಂಡಿಎಂಎ ಹಾಗೂ 310 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಜಯನಗರದಲ್ಲಿ ಸಿಕ್ಕಿಬಿದ್ದ ಆರೋಪಿಗಳು: ‘ನೈಜೀರಿಯಾದ ಹಸ್ಲೆ, ಫ್ರಾಂಕ್ ಅಲಿಯಾಸ್ ಸಂಡೆ ಹಾಗೂ ಇಮಾನ್ಯುಲ್ ಎಂಬುವವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಮೂವರಿಂದ ₹ 1 ಕೆ.ಜಿ 152 ಗ್ರಾಂ ಎಂಡಿಎಂಎ ಹಾಗೂ 40 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.