ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಭಾನುವಾರ ನಡೆದ ದುರ್ಗಾಮಾತಾ ದೌಡ್‌ನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತ ತಲವಾರಿನಿಂದ ತನ್ನ ಹೆಬ್ಬೆರಳು ಕೊಯ್ದುಕೊಂಡು ದುರ್ಗಾದೇವಿಗೆ ತಿಲಕ ಇಟ್ಟ ವಿಡಿಯೊ ತುಣುಕು ಸಾಮಾಜಿಕ ಕಾಲತಾಣಗಳಲ್ಲಿ ಹರಿದಾಡಿದೆ.

ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ದುರ್ಗಾಮಾತಾ ದೌಡ್ ನಡೆಯುತ್ತಿದೆ. ಭಾನುವಾರ ದೌಡ್ ಆರಂಭಕ್ಕೂ ಮುನ್ನ ಕಾರ್ಯಕರ್ತ ತಲವಾರಿನಿಂದ ಬಲಗೈ ಹೆಬ್ಬರಳು ಕೊಯ್ದು ರಕ್ತದ ತಿಲಕವನ್ನು ದೇವಿ ಹಣೆಗೆ ಹಚ್ಚಿದ್ದಾರೆ.

ಅಲ್ಲದೇ, ಪಾಕಿಸ್ತಾನ ಧ್ವಜ ಹೋಲುವ ರಂಗೋಲಿಯನ್ನು ರಸ್ತೆಯಲ್ಲಿ ಬಿಡಿಸಿ, ದೌಡ್‌ನ ಎಲ್ಲ ಕಾರ್ಯಕರ್ತರು ಅದನ್ನು ತುಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.