ಬೆಂಗಳೂರು: ‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 150ನೇ ಸ್ಥಾನದಲ್ಲಿದೆ. ನಿಜವಾಗಿಯೂ ಹೇಳಬೇಕೆಂದರೆ ಅದಕ್ಕಿಂತಲೂ ಕೆಳಮಟ್ಟದಲ್ಲಿದೆ’ ಎಂದು ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ಬರ್ಖಾ ದತ್ ಮತ್ತು ಶಶಿಕುಮಾರ್ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಪತ್ರಕರ್ತರ ಮೇಲೆ 160 ಕಾನೂನುಗಳ ಕತ್ತಿಗಳು ತೂಗಾಡುತ್ತಿವೆ. ಅವುಗಳ ಮೂಲಕವೇ ಪತ್ರಕರ್ತರನ್ನು ನಿಯಂತ್ರಿಸಲಾಗುತ್ತಿದೆ’ ಎಂದರು.

‘ನೀವು ಸವಾಲಿನ ಪತ್ರಿಕೋದ್ಯಮ ನಡೆಸುತ್ತೀರಿ ಎಂದಾದರೆ ನಿಮಗೇ ಸವಾಲು ಹಾಕುತ್ತಾರೆ’ ಎಂದ ಅವರು, ‘ಕೋವಿಡ್ನಿಂದ 720 ಪತ್ರಕರ್ತರು ಮೃತಪಟ್ಟಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಅರೆಕಾಲಿಕ ವರದಿಗಾರರಾಗಿದ್ದರು’ ಎಂದು ಅಂಕಿಅಂಶ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.