ನವದೆಹಲಿ (ಪಿಟಿಐ): ಭಾರತದ ಪುರಾಣದ ಇತಿಹಾಸದಲ್ಲಿ ಕಳೆದುಹೋಗಿರುವ ಆಕರ್ಷಕ ಕಥನಗಳನ್ನು ಒಳಗೊಂಡ ಸುಧಾಮೂರ್ತಿ ಅವರ ಹೊಸಕೃತಿ ‘ದ ಸೇಜ್ ವಿತ್ ಟು ಹಾರ್ನ್ಸ್’ ದೀಪಾವಳಿಗೆ ಬಿಡುಗಡೆ ಆಗಲಿದೆ.

ಮಕ್ಕಳನ್ನು ಗುರಿಯಾಗಿಸಿಕೊಂಡು ರಚಿಸಲಾದ ಇದು ಸುಧಾಮೂರ್ತಿ ಅವರ ‘ಅನ್‌ಯೂಷುವಲ್ ಟೇಲ್ಸ್ ಫ್ರಂ ಮಿಥಾಲಜಿ’ ಸರಣಿಯಲ್ಲಿ ಐದನೆಯದು. ಪುರಾಣಗಳಲ್ಲಿನ ರಾಜ–ರಾಣಿಯರು, ದೇವರು, ದೇವತೆಯರು, ಋಷಿಗಳು, ಅತೀತ ಶಕ್ತಿಯುಳ್ಳ ಮನುಷ್ಯರು ಹೀಗೆ ಆಕರ್ಷಕ ವ್ಯಕ್ತಿತ್ವಗಳನ್ನು ಕೃತಿಯು ಪರಿಚಯಿಸಲಿದೆ.

ಐದು ಸಂಪುಟಗಳಲ್ಲಿ ಸುಧಾ ಮೂರ್ತಿ ಅವರು ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಕುರಿತ ವಿವಿಧ ರಾಜ್ಯಗಳ, ವಿವಿಧ ಆವೃತ್ತಿಗಳ ಭಿನ್ನ ಆವೃತ್ತಿಗಳನ್ನು ಪರಿಚಯಿಸುತ್ತಾರೆ.

‘ನೋಡಲು ಭಿನ್ನವಾಗಿದ್ದರೂ, ಇವುಗಳ ಮೂಲ ಎಳೆ ಒಂದೇ ಆಗಿದೆ. ಪುರಾಣಗಳಲ್ಲಿರುವ ಕೆಲ ಪೋಷಕ ಪಾತ್ರಗಳು ತಮ್ಮದೇ ಕಥೆ ಹಾಗೂ ಭಿನ್ನ ಜೀವನ ದೃಷ್ಟಿಕೋನ ಹೊಂದಿವೆ’ ಎಂದು ಸುಧಾಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.