ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕಳೆದ ವಾರವೇ ಕೊನೆಗೊಂಡಿದ್ದು, ಎಲ್ಲ ಶಿಕ್ಷಕರಿಗೆ ಸೋಮವಾರದೊಳಗೆ (ನ.11) ಚಾಲನಾ ಆದೇಶವನ್ನು ಕಡ್ಡಾಯವಾಗಿ ನೀಡಬೇಕು ಎಂದು ಇಲಾಖೆಯಆಯುಕ್ತರು ಸೂಚನೆ ನೀಡಿದ್ದಾರೆ.

ಬಹುತೇಕ ಮಂದಿಗೆ ಚಾಲನಾ ಆದೇಶ ನೀಡಲಾಗಿದ್ದು, ತಾಂತ್ರಿಕ ಕಾರಣಗಳಿಂದಾಗಿ ಕೆಲವರಿಗೆ ಬಾಕಿ ಉಳಿದಿದೆ. ಅದನ್ನೂ ಸಹ ತಕ್ಷಣ ನೀಡುವ ನಿಟ್ಟಿನಲ್ಲಿ ಬಿಇಒ ಮತ್ತು ಡಿಡಿಪಿಐಗಳಿಗೆ ಈ ಆದೇಶ ನೀಡಲಾಗಿದೆ.

ವರ್ಗಾವಣೆಗೊಂಡ ಹುದ್ದೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಎಲ್ಲ ಶಿಕ್ಷಕರ ಅಂತಿಮ ವೇತನ ಪಟ್ಟಿ (ಎಲ್ಪಿಸಿ) ಮತ್ತು ಸೇವಾವಹಿಯನ್ನು (ಸರ್ವಿಸ್ ರಿಜಿಸ್ಟರ್) ಇದೇ 16ರೊಳಗೆ ಸಂಬಂಧಪಟ್ಟ ಕಚೇರಿಗಳಿಗೆ ಕಳುಹಿಸಲು ಸಹ ತಾಕೀತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.