ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಹತ್ಯೆಗಳಿಂದ ರಾಜ್ಯಕ್ಕೆ ಆಗುವ ವಾರ್ಷಿಕ ನಷ್ಟ ₹2.33 ಲಕ್ಷ ಕೋಟಿ!

Published : 16 ಸೆಪ್ಟೆಂಬರ್ 2024, 21:14 IST
Last Updated : 16 ಸೆಪ್ಟೆಂಬರ್ 2024, 21:14 IST
ಫಾಲೋ ಮಾಡಿ
Comments

ನವದೆಹಲಿ: ಆತ್ಮಹತ್ಯೆ ಪ್ರಕರಣಗಳಿಂದ ‌ಭಾರತದ ಆರ್ಥಿಕತೆಯ ಮೇಲೆ ಆಗುತ್ತಿರುವ ವಾರ್ಷಿಕ ಹೊರೆಯ ಮೊತ್ತ ₹13.41 ಲಕ್ಷ ಕೋಟಿ ರೂಪಾಯಿ (16 ಬಿಲಿಯನ್‌ ಡಾಲರ್). ರಾಜ್ಯವಾರು ಕರ್ನಾಟಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ಥಿಕತೆಯ ಹೊರೆ‌ಯಲ್ಲಿ ರಾಜ್ಯದ ಪಾಲು ಐದನೇ ಒಂದರಷ್ಟಾಗಿದೆ.

ದಕ್ಷಿಣದ ರಾಜ್ಯಗಳಾದ ಕರ್ನಾಟಕ (₹2.33 ಲಕ್ಷ ಕೋಟಿ), ತಮಿಳುನಾಡು (₹2.13 ಲಕ್ಷ ಕೋಟಿ) ಮತ್ತು ಮಹಾರಾಷ್ಟ್ರ (₹1.81 ಲಕ್ಷ ಕೋಟಿ) ರಾಜ್ಯಗಳ ಒಟ್ಟು ಪಾಲು ಬಹುತೇಕ ಶೇ 45ರಷ್ಟಿದೆ. ಈ ಮೊತ್ತ ಕೇಂದ್ರ ಆರೋಗ್ಯ ಸಚಿವಾಲಯದ ವಾರ್ಷಿಕ ಬಜೆಟ್‌ಗಿಂತಲೂ ಅಧಿಕವಾಗಿದೆ.

ಆತ್ಮಹತ್ಯೆ ಕಾರಣಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸಿರುವ ರಾಜ್ಯಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳು ಇವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ 20–34 ವರ್ಷ ವಯಸ್ಸಿನವರೇ ಹೆಚ್ಚಿದ್ದು, ಒಟ್ಟು ಪ್ರಕರಣಗಳಲ್ಲಿ ಈ ವಯಸ್ಸಿನವರ ಪ್ರಮಾಣ ಶೇ 53ರಷ್ಟಿದೆ.

2019ರಲ್ಲಿ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿರುವ 1.95 ಲಕ್ಷ ಆತ್ಮಹತ್ಯೆಗಳ ಅಂಕಿ ಅಂಶಗಳನ್ನು ಈ ಸಮೀಕ್ಷೆಯು ಆಧರಿಸಿದೆ.

ಅಧ್ಯಯನ ವರದಿಯು ಕಳೆದ ವಾರ ‘ಲ್ಯಾನ್ಸೆಟ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಇದು, ಆತ್ಮಹತ್ಯೆಯಿಂದ ಆಗುವ ಆರ್ಥಿಕ ಹೊರೆಯನ್ನು ಲೆಕ್ಕ ಹಾಕಿದ ಮೊದಲಅಧ್ಯಯನವಾಗಿದೆ. ಜೀವಹಾನಿಯನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ವರದಿ ಪ್ರತಿಪಾದಿಸಿದೆ.

20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದು, ಇಲ್ಲಿ ಆರ್ಥಿಕತೆಯ ಮೇಲಿನ ಹೊರೆ ಹೆಚ್ಚಲು ಕಾರಣವಾಗಿದೆ.

ಸಮೀಕ್ಷಕರ ಪ್ರಕಾರ, ಆತ್ಮಹತ್ಯೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕಲು. ಈಗ ಮಾನಸಿಕ ಆರೋಗ್ಯ ಸ್ಥಿತಿ ಸುಧಾರಣೆಗೆ ಮಾತ್ರ ಹಣ ಮೀಸಲಿಡಲಾಗುತ್ತಿದೆ.

ಉತ್ಪಾದಕತೆ ಮೇಲೆ ಪರಿಣಾಮ

ಆತ್ಮಹತ್ಯೆಗಳು ಆರ್ಥಿಕವಾಗಿ ಪರಿಣಾಮ ಬೀರುತ್ತವೆ. ಯುವ ಮತ್ತು ಶ್ರಮಿಕ ವರ್ಗದವರ ಕೊಡುಗೆಯು ದೇಶದ ಆರ್ಥಿಕತೆಗೆ ಹೆಚ್ಚಿದೆ. ಆತ್ಮಹತ್ಯೆಗಳನ್ನು ತಡೆಯಲು ಪೂರಕವಾದ ನೀತಿ ಇಲ್ಲದಿದ್ದರೆ, ಇದರ ಒಟ್ಟು ಪರಿಣಾಮ ಉತ್ಪಾದಕತೆಯ ಮೇಲೆ ಆಗುತ್ತದೆ

- ಸಿದ್ದೇಶ್ ಜ್ಯಾದೆ, ಸಮೀಕ್ಷಾ ವರದಿಯ ಲೇಖಕ, ಪುಣೆಯ ಅಸೋಸಿಯೇಷನ್‌ ಫಾರ್ ಸೋಷಿಯಲಿ ಅಪ್ಲಿಕಬಲ್ ರೀಸರ್ಚ್ ಸಂಸ್ಥೆಯ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT