ಬೆಂಗಳೂರು: ನಾಡಹಬ್ಬ ದಸರಾ ವೇದಿಕೆಯಲ್ಲಿ ಪ್ರಕಾಶ್ ಮುಧೋಳ ಎಂಬ ರೌಡಿ ಶೀಟರ್ ಅನ್ನು ಗಣ್ಯರ ಸಾಲಿನಲ್ಲಿ ಕೂರಿಸುವ ಮೂಲಕ ಸರ್ಕಾರವು ನಾಡಹಬ್ಬದ ಘನತೆಗೆ ಮಸಿ ಬಳಿದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

‘ಅಪರಾಧದ ಹಿನ್ನೆಲೆಯವರನ್ನು ಅತಿಥಿಗಳನ್ನಾಗಿ ಗೌರವಿಸುವುದು ದುರಂತವೇ ಸರಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಸಾಲಿನಲ್ಲಿ ರೌಡಿ ಶೀಟರ್ ಪ್ರಕಾಶ್ ಕೂಡ ಇದ್ದಾನೆ. ಇದರಿಂದ ನಾಡಿಗೆ ಯಾವ ಸಂದೇಶ ರವಾನೆಯಾಗುತ್ತದೆ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ‘ಎಕ್ಸ್’ ಮೂಲಕ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.