ಬೆಂಗಳೂರು: ‘ಜಮೀರ್ ಅಹಮದ್ ಖಾನ್ ಅವರು ವಕ್ಫ್ ಸಚಿವ ಆಗಿರಬಹುದು. ಹಾಗೆಂದು ಖಾತೆಗಳನ್ನು ಬದಲಾಯಿಸಿ ಎಂದು ನಿಯಮಬಾಹಿರವಾಗಿ ಹೇಳುವುದು ತಪ್ಪು. ನಿಯಮಬಾಹಿರ ಸೂಚನೆಗಳನ್ನು ಪಾಲಿಸಿರುವ ಅಧಿಕಾರಿಗಳದ್ದೂ ತಪ್ಪಿದೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಪಹಣಿಯಲ್ಲಿ ಆಗಿರುವ ತಪ್ಪುಗಳಿಗೆ ಯಾರು ಕಾರಣವೋ ಆ ಕುರಿತು ತನಿಖೆ ನಡೆಸಿ ಅವರ ಮೇಲೆ ಕ್ರಮ ಆಗಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿಯ ಸೂಚನೆ ಮೇರೆಗೆ ವಕ್ಫ್ ಮಂಡಳಿ ನೊಟೀಸ್ ನೀಡಿದೆ. ಪಹಣಿ ತಿದ್ದುಪಡಿ ಆಗಿದೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ಕಾನೂನುಬಾಹಿರವಾಗಿ ಕ್ರಮ ತಗೊಳ್ಳುವಂತೆ ಮುಖ್ಯಮಂತ್ರಿ ಸೂಚನೆ ನೀಡಿಲ್ಲ. ನಿಯಮಬಾಹಿರ ಸೂಚನೆಯನ್ನು ಅವರು ಕೊಡಲು ಸಾಧ್ಯವೂ ಇಲ್ಲ. ಆದರೆ ಮಧ್ಯೆ ಇರುವವರು ಮುಖ್ಯಮಂತ್ರಿಯ ಹೆಸರು ದುರುಪಯೋಗಪಡಿಸಿಕೊಂಡು ಈ ರೀತಿ ಮಾಡಿರುವ ಸಾಧ್ಯತೆಯಿದೆ’ ಎಂದರು.

‘ಇನ್ನೊಬ್ಬರ ಚಿತಾವಣೆಯಿಂದಾಗಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆಗಿದೆಯೇ ಅಥವಾ ಅಜಾಗರೂಕತೆಯಿಂದ ಆಗಿದೆಯೇ ಎನ್ನುವ ಚರ್ಚೆಯಿದೆ. ರೈತರ ದಾಖಲೆಗಳಲ್ಲಿ ವಕ್ಫ್ ಹೆಸರು ಬರಲು ಯಾರು ಕಾರಣ? ಯಾರ ಆದೇಶ ಮೇಲೆ ವಕ್ಫ್ ಹೆಸರು ಬಂದಿದೆ ಎಂಬ ಬಗ್ಗೆ ತನಿಖೆ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ’ ಎಂದರು.

‘ದಾಖಲೆಗಳಲ್ಲಿ ವಕ್ಫ್ ಹೆಸರನ್ನು ಬಿಜೆಪಿಯವರೇ ಹಾಕಿಸಿ, ಈಗ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಯಾಕೆ ಭಾವಿಸಬಾರದು? ಆದ್ದರಿಂದ ಸಮಗ್ರ ತನಿಖೆ ಆಗಬೇಕು’ ಎಂದೂ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.