ಬೆಂಗಳೂರು: ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಯೂ ಕರ್ನಾಟಕದಲ್ಲೇ ಮೊದಲ ಬಾರಿಗೆ ‘ಇಂಟ್ರಾ ಆಪರೇಟಿವ್ ರೇಡಿಯೊ ಥೆರಪಿ’ (ಐಓಆರ್ಟಿ) ಚಿಕಿತ್ಸಾ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಈ ಚಿಕಿತ್ಸೆ ಮೂಲಕ 40 ದಿನಗಳು ತೆಗೆದಕೊಳ್ಳಬೇಕಾದ ವಿಕಿರಣ ಚಿಕಿತ್ಸೆಯು ಕೇವಲ 40 ನಿಮಿಷದೊಳಗೆ ಪೂರ್ಣಗೊಳ್ಳಲಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ. ಸಂದೀಪ್ ನಾಯಕ್, ಸ್ತನ ಕ್ಯಾನ್ಸರ್ ಹೊಂದಿರುವವರಿಗಾಗಿ ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿಯನ್ನು ಪರಿಚಯಿಸಿದ್ದೇವೆ. ಐಓಆರ್ಟಿ ಇದೊಂದು ವಿಕಿರಣ ಚಿಕಿತ್ಸಾ ತಂತ್ರಜ್ಞಾನವಾಗಿದೆ. ಸ್ತನಕ್ಯಾನ್ಸರ್ ಹೊಂದಿದವರಿಗೆ ಗಡ್ಡೆ ತೆಗೆದ ನಂತರ ರೇಡಿಯೋಥರಪಿ ನಡೆಸಲು 30ರಿಂದ 40 ದಿನಗಳ ಕಾಲ ತೆಗೆದುಕೊಳ್ಳಲಾಗುತ್ತದೆ. ಇದು ಅತ್ಯಂತ ದೀರ್ಘಾವಧಿಯಾಗಿರುವುದರಿಂದ ರೋಗಿಯೂ ಇದಕ್ಕೆ ಬಳಲಬಹುದು. ಇಂಟ್ರಾಆಪರೇಟಿವ್ ರೇಡಿಯೋ ಥೆರಪಿ ಚಿಕಿತ್ಸಾ ತಂತ್ರಜ್ಞಾನದಿಂದ ಕೇವಲ 30 ನಿಮಿಗಳಲ್ಲಿ ಈ ಥೆರಪಿ ಪೂರ್ಣ ಮಾಡಬಹುದು. ಇದು ಅತ್ಯಂತ ಪರುಣಾಮಕಾರಿ ಎಂದು ಈಗಾಗಲೇ ಸಾಬೀತಾಗಿದೆ. ದೇಶದಲ್ಲಿ ಕೆಲವು ಆಸ್ಪತ್ರೆಗಳು ಮಾತ್ರ ಈ ಚಿಕಿತ್ಸಾ ವಿಧಾನವನ್ನು ಹೊಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ತಂತ್ರಜ್ಞಾನವನ್ನು ಫೋರ್ಟಿಸ್ನಲ್ಲಿ ಮಾತ್ರ ಅವಳವಡಿಸಲಾಗಿದೆ. ಡಿಸೆಂಬರ್ನಿಂದ ಜನವರಿಯೊಳಗೆ ನಾಲ್ಕು ಸ್ತನಕ್ಯಾನ್ಸರ್ ರೋಗಿಗಳಿಗೆ ಐಓಆರ್ಟಿ ತಂತ್ರಜ್ಞಾನದಿಂದ ಕೇವಲ 30 ನಿಮಿಷದಲ್ಲಿ ಥೆರಪಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.

ಫೋರ್ಟಿಸ್ ಆಸ್ಪತ್ರೆ ಶಾಖೆ ನಿರ್ದೇಶಕ ಡಾ, ಮನೀಶ್ ಮಟ್ಟೂ ಮಾತನಾಡಿ, ‘ಕೋಮಾಬಿಡಿಟಿ ಸಮಸ್ಯೆ ಇರುವವರಿಗೆ ತಂತ್ರಜ್ಞಾನ ಹೆಚ್ಚು ಉಪಯುಕ್ತ. ಗಡ್ಡೆ ತೆರವುಗಳಿಗೆ ರೇಡಿಯೋ ಥೆರಪಿಗಾಗಿ 30 ದಿನಗಳ ಕಾಲ ಆಸ್ಪತ್ರೆಗೆ ಬಂದು ಹೋಗುವುದು ಅತ್ಯಂತ ಕಷ್ಟದ ಕೆಲಸ. ಐಓಆರ್ಟಿ ಕೇವಲ 30 ನಿಮಿಷದಲ್ಲೇ ಥೆರಪಿ ಪೂರ್ಣಗೊಳಿಸುವುದರಿಂದ ಸ್ತನಕ್ಯಾನ್ಸರ್ ರೋಗಿಗಳು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಮತ್ತೊಂದು ವಿಶೇಷವೆಂದರೆ, ಈ ತಂತ್ರಜ್ಞಾನದಿಂದ ನೇರವಾಗಿ ವಿಕಿರಣ ಗಡ್ಡೆ ತೆರವುಗೊಳಿಸಿದ ಜಾಗಕ್ಕೆ ನೇರವಾಗಿ ಮುಟ್ಟುತ್ತದೆ. ಇದರಿಂದ ವಿಕಿರಣಗಳು ಇತರೆ ಅಂಗಗಳಿಗೂ ತಗುಲುವ ಅಪಾಯ ಇರುವುದಿಲ್ಲ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.