ಮೂಡುಬಿದಿರೆ: ಮಹಾರಾಷ್ಟ್ರದಲ್ಲಿ ಮದುವೆ ಸಂದರ್ಭದಲ್ಲಿ ವಧು–ವರರ ಹಾಗೂ ಅವರ ಪರಿವಾರದವರ ಉಡುಗೆ ತೊಡುಗೆ ಹೇಗಿರುತ್ತದೆ, ಹಿಮಾಚಲ ಪ್ರದೇಶದಲ್ಲಿ ಮದುವಣಗಿತ್ತಿಯನ್ನು ಮದುವೆ ಮಂಟಪಕ್ಕೆ ಕರೆ ತರುವ ಮೆರವಣಿಗೆ ಎಷ್ಟು ಅದ್ಧೂರಿ, ಮದುವೆ ದಿನ ಹಾಗೂ ಅದರ ಮುನ್ನಾ ದಿನ ಕೊಡವರು ಹಾಡು– ಕುಣಿತಗಳೊಂದಿಗೆ ಸಂಭ್ರಮಿಸುವ ಪರಿ ಹೇಗೆ...

ವಿವಿಧ ರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ವಿವಾಹಸಮಾರಂಭಗಳ ವೈಶಿಷ್ಟ್ಯಗಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಶುಕ್ರವಾರ ಒದಗಿ ಬಂದಿತ್ತು.

ಇಲ್ಲಿನ ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಾಂಗಣದಲ್ಲಿ ನಡೆಯುತ್ತಿರುವ ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022’ರ ‘ಏಕ ಭಾರತ ಶ್ರೇಷ್ಠ ಭಾರತ’ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಹರಿಯಾಣ, ಅಸ್ಸಾಂ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ತಂಡಗಳು ತಮ್ಮ ನೆಲದ ಮದುವೆಯ ವೈಶಿಷ್ಟ್ಯಗಳನ್ನು ಪ್ರದರ್ಶಿಸಿದವು. ಒಂದಕ್ಕಿಂತ ಒಂದು ಭಿನ್ನವಾಗಿದ್ದ ಈ ಸಂಪ್ರದಾಯಗಳು ದೇಶದ ಸಾಂಸ್ಕೃತಿಕ ವೈವಿಧ್ಯಕ್ಕೆ ಕನ್ನಡಿ ಹಿಡಿದವು.

ಸಂಪ್ರದಾಯ ಬೇರೆಯೇ ಆಗಿದ್ದರೂ ಈ ಆಚರಣೆಗಳಲ್ಲಿ ಸಂಭ್ರಮ–ಸಡಗರಗಳು ಒಂದೇ ರೀತಿ ಇದ್ದವು. ಮದುವೆ ಸಂದರ್ಭದಲ್ಲಿ ಕಳೆಗಟ್ಟುವ ರಂಗುರಂಗಿನ ಲೋಕದ ಚಿತ್ರಣವನ್ನು ಕಟ್ಟಿಕೊಟ್ಟವು. ದಿಬ್ಬಣ ಶಾಸ್ತ್ರ, ತಾಳಿ ಕಟ್ಟುವುದು ಹಾಗೂ ಧಾರೆ ಎರೆಯುವ ಶಾಸ್ತ್ರ, ಹೆಣ್ಣು ಒಪ್ಪಿಸಿಕೊಡುವ ಶಾಸ್ತ್ರಗಳಲ್ಲಿ ಸಾಮ್ಯತೆ ಇದ್ದವು.

ಕರ್ನಾಟಕದಲ್ಲೂ ಜಿಲ್ಲೆಯಿಂದ ಜಿಲ್ಲೆಗೆ ಮದುವೆ ಪದ್ಧತಿಗಳಲ್ಲಿ ಇರುವ ವೈವಿಧ್ಯಗಳನ್ನೂ ಈ ಕಾರ್ಯಕ್ರಮ ತೆರೆದಿಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.