ಉಡುಪಿ: ಪ್ರತಿವರ್ಷ ಯಕ್ಷಗಾನ ಕಲಾರಂಗದಿಂದ ಹಿರಿಯ ಸಾಧಕರ ಸ್ಮರಣಾರ್ಥ ಸಾಧಕ ಕಲಾವಿದರಿಗೆ ಕೊಡಮಾಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ತೆಂಕು ಹಾಗೂ ಬಡಗುತಿಟ್ಟಿನ 21 ಮಂದಿ ಯಕ್ಷಗಾನ ಕಲಾವಿದರಿಗೆ ನೀಡಲಾಗುತ್ತಿದೆ.

ಡಾ.ಬಿ.ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಕೊಣಂದೂರಿನ ಚಿದಂಬರ ಬಾಬು, ಪ್ರೊ.ಬಿ.ವಿ.ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಗೆ ಕೋಟ ಎಚ್.ಗೋವಿಂದ ಉರಾಳ, ನಿಟ್ಟೂರು ಸುಂದರ ಶೆಟ್ಟಿ, ಮಹೇಶ ಡಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ವಸಂತ ಶೆಟ್ಟಿ, ಮುಂಡ್ಕೂರು ಬಿ.ಜಗಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ತೀರ್ಥಹಳ್ಳಿಯ ಕೆ.ಎಸ್. ಶಿವಶಂಕರ ಭಟ್, ಕೆ.ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಬೈಂದೂರಿನ ಸಂಜೀವ ಕೊಠಾರಿ.

ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿಗೆ ಚಿಕ್ಕಮಗಳೂರಿನ ಸೀತೂರು ಎಚ್.ಎಸ್. ಅನಂತ ಪದ್ಮನಾಭ ರಾವ್, ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿಗೆ ಯಲ್ಲಾಪುರದ ಗಣಪತಿ ಭಾಗವತ, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿಗೆ ಮಂದಾರ್ತಿಯ ಎಂ. ರಘುರಾಮ ಮಡಿವಾಳ.

ಸಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿಗೆ ಹಾಲಾಡಿಯ ಕೋಡಿ ವಿಶ್ವನಾಥ ಗಾಣಿಗ, ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿಗೆ ಸಿದ್ದಾಪುರದ ಅಶೋಕ ಭಟ್ಟ, ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿಗೆ ಗುಣವಂತೆಯ ಸುಬ್ರಾಯ ನಾರಾಯಣ ಭಂಡಾರಿ, ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿಗೆ ಚೋರಾಡಿ ವಿಠಲ ಕುಲಾಲ, ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿಗೆ ಎರ್ಮಾಳು ವೈ.ವಾಸುದೇವ ರಾವ್, ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿಗೆ ಸಾಗರದ ಪ್ರಭಾಕರ ಹೆಗಡೆ.

ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿಗೆ ಕಾಸರಗೋಡು ಮಧೂರು ರಾಧಾಕೃಷ್ಣ ನಾವಡ, ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿಗೆ ಪಡುಬಿದ್ರಿಯ ರತ್ನಾಕರ ಆಚಾರ್ಯ, ಕಡಂದೇಲು ಪುರುಷೋತ್ತಮ ಭಟ್ ಪ್ರಶಸ್ತಿಗೆ ಬಂಟ್ವಾಳದ ಗುಂಡಿಮಜಲು ಗೋಪಾಲ ಭಟ್ಟ, ಕಡತೋಕ ಕೃಷ್ಣ ಭಾಗವತ್ ಪ್ರಶಸ್ತಿಗೆ ಸಾಗರದ ಇಡುವಾಣಿಯ ತ್ರಯಂಬಕ ಹೆಗಡೆ, ಬಿ.ಪಿ. ಕರ್ಕೇರಾ ಪ್ರಶಸ್ತಿಗೆ ಬೆಳ್ತಗಂಡಿಯ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿಗೆ ಬೆಳ್ತಂಗಡಿ ಎನ್.ವಸಂತ ಗೌಡ ಕಾಯರ್ತಡ್ಕ, ಪ್ರಭಾವತಿ ವಿ. ಶೆಣೈ-ಯು.ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿಗೆ ಬಂಟ್ವಾಳದ ಶ್ರೀಧರ ಪೂಜಾರಿ ಪಂಜಾಜೆ ಅವರನ್ನು ಆಯ್ಕೆ ಮಾಡಲಾಗಿದೆ.

ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಹಿರಿಯ ಕಾರ್ಯಕರ್ತ ವಿಜಯಕುಮಾರ್ ಮುದ್ರಾಡಿ ಅವರಿಗೆ ನೀಡಲಾಗುವುದು. ಯಕ್ಷಚೇತನ ಪ್ರಶಸ್ತಿ ಹೊರತುಪಡಿಸಿ ಉಳಿದೆಲ್ಲಾ ಪ್ರಶಸ್ತಿಗಳು ತಲಾ ₹20,000 ನಗದು ಪ್ರಶಸ್ತಿ ಒಳಗೊಂಡಿವೆ.

ನ.18ರಂದು ಸಂಜೆ 5ಕ್ಕೆ ಕಟೀಲಿನ ಸರಸ್ವತಿ ಸದನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.