ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಕೊಡಮಾಡುವ 2017ನೇ ಸಾಲಿನ ಜೀವಮಾನದ ಗೌರವ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 50 ಸಾವಿರ ಒಳಗೊಂಡಿದೆ.

ಮಂಡ್ಯ ರಮೇಶ್, ನಾಗೇಶ್ ಕಶ್ಯಪ್, ಎಲ್.ಎನ್.ಮುಕುಂದ್‌ರಾಜ್, ನಾಗಣಿ ಭರಣ ಸೇರಿ 25 ರಂಗಕರ್ಮಿಗಳಿಗೆ ಅಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿ ತಲಾ ₹ 25 ಸಾವಿರ ಒಳಗೊಂಡಿದೆ.

ಕೆ.ಹಿರಣ್ಯಯ್ಯ ದತ್ತಿ ಪುರಸ್ಕಾರಕ್ಕೆ ರಂಗನಟ ಚೌಡಪ್ಪ ದಾಸ್, ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ನಿರ್ದೇಶಕ ಬಸವರಾಜ ಬೆಂಗೇರಿ, ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ರಂಗಭೂಮಿ ನಟಿ ಮನೋರಂಜನ ಸಿಂಧೆ ಹಾಗೂ ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ನಟ ಮಾಯಿಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರಗಳು ತಲಾ ₹ 5 ಸಾವಿರ ನಗದನ್ನು ಒಳಗೊಂಡಿವೆ.

ಈ ಎಲ್ಲ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು 2018ರ ಫೆಬ್ರುವರಿಯಲ್ಲಿ, ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದು ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.