ಮಸ್ಕತ್: ಒಮಾನ್ ಸಾಗರ ಪ್ರದೇಶದಲ್ಲಿ ತೈಲ ಸಾಗಣೆ ಹಡಗು ಮಗುಚಿ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಸಾಗರ ಭದ್ರತಾ ಕೇಂದ್ರ ತಿಳಿಸಿದೆ.

ನಾಪತ್ತೆಯಾಗಿರುವ ಸಿಬ್ಬಂದಿ ಪೈಕಿ ಮೂವರು ಶ್ರೀಲಂಕನ್ನರು ಎನ್ನಲಾಗಿದೆ.

ಒಮಾನ್ನ ಪ್ರಮುಖ ಬಂದರು 'ಡುಗ್ಮ್'ನಿಂದ ಹೊರಟಿದ್ದ 'ಪ್ರೆಸ್ಟೀಜ್ ಪಾಲ್ಕನ್' ಹಡಗು ಪಲ್ಟಿಯಾಗಿದೆ. ಪೂರ್ವ ಆಫ್ರಿಕಾದ ಕಾಮೋರ್ಸ್ ದೇಶದ ತೈಲ ಟ್ಯಾಂಕರ್ ಇದರಲ್ಲಿತ್ತು ಎಂದು ಸಾಗರ ಭದ್ರತಾ ಕೇಂದ್ರ ರಾಯಿಟರ್ಸ್ಗೆ ಮಂಗಳವಾರ ತಿಳಿಸಿದೆ.

ಹಡಗು ಯೆಮನ್ನ ಅದೆನ್ಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.