ಕೇಪ್ ಕೆನಾವೆರಲ್: ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಡೆಗೆ ಭಾನುವಾರ ಪ್ರಯಾಣ ಬೆಳೆಸಿದರು.

ಗಗನಯಾತ್ರಿಗಳಾದ ‘ನಾಸಾ’ದ ಮ್ಯಾಥ್ಯೂ ಡಾಮಿನಿಕ್, ಮಿಷೆಲ್ ಬಾರ್ರಾಟ್ ಮತ್ತು ಜನೆಟ್ ಎಪ್ಸ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗ್ರೆಬೆನ್‌ಕಿನ್ ಅವರನ್ನು ‘ಸ್ಪೇಸ್‌ಎಕ್ಸ್’ನ ಫಾಲ್ಕನ್ ಗಗನನೌಕೆಯು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊತ್ತು ಸಾಗಿತು. ಅದು ಮಂಗಳವಾರ ಕಕ್ಷೆ ತಲುಪಲಿದೆ.

ಈ ಗಗನಯಾತ್ರಿಗಳು ಮುಂದಿನ ಆರು ತಿಂಗಳು ಬಹ್ಯಾಕಾಶ ನಿಲ್ದಾಣದಲ್ಲೇ ಇರಲಿದ್ದಾರೆ. ಇದೇ ವೇಳೆ ‘ನಾಸಾ’ ಎರಡು ರಾಕೆಟ್‌ಶಿಪ್‌ಗಳನ್ನು (ರಾಕೆಟ್‌ಚಾಲಿತ ಬಾಹ್ಯಾಕಾಶ ನೌಕೆ) ಉಡಾವಣೆ ಮಾಡಲಿದೆ.

ಸದ್ಯ ಅಮೆರಿಕ, ಡೆನ್ಮಾರ್ಕ್, ಜಪಾನ್ ಮತ್ತು ರಷ್ಯಾದ ತಲಾ ಒಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಹೊಸ ತಂಡ ನಿಲ್ದಾಣ ತಲುಪಿದ ನಂತರ ಅವರು ವಾಪಸ್ಸಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.