ಟೋಕಿಯೊ(ಜಪಾನ್): ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪನವಾಗಿದೆ. ಇದರ ಬೆನ್ನಲ್ಲೇ, ಸುನಾಮಿ ಅಪ್ಪಳಿಸುವ ಕುರಿತು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.

ಭೂಕಂಪನ ಸಂಬಂಧಿತ ಅವಘಡಗಳಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7.1 ತೀವ್ರತೆಯ ಭೂಕಂಪನ ದಾಖಲಾಗಿದ್ದು, ದಕ್ಷಿಣಕ್ಕಿರುವ ಕ್ಯೂಶು ದ್ವೀಪದ ಪೂರ್ವ ಕರಾವಳಿಯ ಸಾಗರದ 30 ಕಿ.ಮೀ. ಆಳದಲ್ಲಿ ಕಂಪನ ಕೇಂದ್ರವಿತ್ತು ಎಂದು ಸಂಸ್ಥೆ ತಿಳಿಸಿದೆ.

ನಿಚಿಯಾನ್ ನಗರ, ಸುತ್ತಲಿನ ಸ್ಥಳಗಳಾದ ಮಿಯಾಜಕಿ ಪ್ರಾಂತ್ಯದಲ್ಲಿ ಹೆಚ್ಚು ಕಂಪನದ ಅನುಭವವಾಗಿದೆ ಎಂದೂ ಹೇಳಿದೆ.

ಭೂಮಿ ಕಂಪಿಸಿದ ಅರ್ಧ ಗಂಟೆ ಬಳಿಕ, ಕ್ಯೂಶು ಮತ್ತು ಶಿಕೊಕು ದ್ವೀಪದ ಉದ್ದಕ್ಕೂ 1.6 ಅಡಿಗಳಷ್ಟು ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದುದು ಸಹ ಕಂಡುಬಂದಿದೆ.

ಭೂಕಂಪನ ಕೇಂದ್ರಕ್ಕೆ ಸಮೀಪವಿರುವ ಮಿಯಾಜಕಿ ವಿಮಾನನಿಲ್ದಾಣದ ಕಟ್ಟಡಗಳ ಕಿಟಕಿಗಳು ಒಡೆದಿವೆ ಎಂದು ಎನ್‌ಎಚ್‌ಕೆ ಟಿ.ವಿ ವರದಿ ಮಾಡಿದೆ.

ಕ್ಯೂಶು ಮತ್ತು ಶಿಕೊಕು ದ್ವೀಪದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಅಣುವಿದ್ಯುತ್ ಸ್ಥಾವರಗಳು ಸೇರಿದಂತೆ ಎಲ್ಲ 12 ಸ್ಥಾವರಗಳು ಸುರಕ್ಷಿತವಾಗಿವೆ ಎಂದು ಜಪಾನ್‌ನ ಅಣು ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.

ಜನವರಿ 1ರಂದು ಸಂಭವಿಸಿದ್ದ ಭೂಕಂಪದಲ್ಲಿ 240 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.