ಸಿಂಗಪುರ: ಸಿಂಗಪುರದಿಂದ ಚೀನಾದ ಗಾಂಗ್ಝೌಗೆ ತೆರಳುತ್ತಿದ್ದ ವಿಮಾನವೊಂದು ಟರ್ಬುಲೆನ್ಸ್ಗೆ ಒಳಗಾಗಿ ಏಳು ಮಂದಿ ಗಾಯಗೊಂಡಿದ್ದಾರೆ. ಒಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ‘ಸ್ಟ್ರಾಯಿಟಸ್ ಟೈಮ್ಸ್’ ವರದಿ ಮಾಡಿದೆ.
.ಟರ್ಬುಲೆನ್ಸ್ಗೆ ಸಿಲುಕಿದ ವಿಮಾನ | 22 ಮಂದಿ ಬೆನ್ನುಹುರಿ, 6 ಮಂದಿ ಮಿದುಳಿಗೆ ಗಾಯ.
ಶುಕ್ರವಾರ ಬೆಳಿಗ್ಗೆ ಘಟನೆ ನಡೆದಿದ್ದು, ಗಾಂಗ್ಝೌಗೆ ಸಮೀಪಿಸುತ್ತಿರುವಾಗ ವಿಮಾನ ಟರ್ಬುಲೆನ್ಸ್ಗೆ ಒಳಗಾಗಿದೆ. ಬೋಯಿಂಗ್ 787–9 ಡ್ರೀಮ್ಲೈನರ್ ವಿಮಾನ ಸ್ಥಳೀಯ ಕಾಲಮಾನ ಬೆಳಿಗ್ಗೆ 9.10ಕ್ಕೆ ಅನಿರೀಕ್ಷಿತವಾಗಿ ಲ್ಯಾಂಡ್ ಆಗಿದೆ. ಬೆಳಿಗ್ಗೆ 5.45ಕ್ಕೆ ಸಿಂಗಪುರದಿಂದ ಟೇಕಾಫ್ ಆಗಿತ್ತು.

ಗಾಂಗ್ಝೌ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ನಾಲ್ಕು ಮಂದಿ ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿಗೆ ತಕ್ಷಣವೇ ವೈದ್ಯಕೀಯ ನೆರವು ನೀಡಲಾಯಿತು. ಒಬ್ಬ ಪ್ರಯಾಣಿಕರನ್ನು ಹೆಚ್ಚಿನ ನಿಗಾಕ್ಕಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವಿಮಾನ ಸಂಸ್ಥೆ ತಿಳಿಸಿದೆ.
.ತಾಂತ್ರಿಕ ದೋಷ | ಮಾಸ್ಕೊದಲ್ಲಿ ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ.
ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ನೆರವುಗಳನ್ನು ನೀಡುವುದಾಗಿ ವಿಮಾನ ಸಂಸ್ಥೆ ಹೇಳಿದೆ.

ವಿಮಾನದಲ್ಲಿದ್ದ ಪ್ರಯಾಣಿಕರ ಹಾಗೂ ಸಿಬ್ಬಂದಿ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

FlightRadar24 ದತ್ತಾಂಶದ ಪ್ರಕಾರ ಟರ್ಬುಲೆನ್ಸ್ಗೆ ಒಳಗಾಗುವ ವೇಳೆ ವಿಮಾನ 35 ಸಾವಿರ ಅಡಿ ಎತ್ತರದಲ್ಲಿತ್ತು.
.ರಾಜಸ್ಥಾನದಲ್ಲಿ MiG-29 ಯುದ್ಧ ವಿಮಾನ ಪತನ: ಪೈಲಟ್ ಸುರಕ್ಷಿತ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.