ಅಬುಜಾ, ನೈಜಿರಿಯಾ : ನೈಜಿರಿಯಾದ ಉತ್ತರ ಕೇಂದ್ರ ಭಾಗದಲ್ಲಿ ಭಾನುವಾರ ಪ್ರಯಾಣಿಕರ ದೋಣಿ ಮಗುಚಿದ್ದು, ಕನಿಷ್ಠ 24 ಮಂದಿ ಸತ್ತಿದ್ದಾರೆ. ಮಕ್ಕಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿ 100ಕ್ಕೂ ಹೆಚ್ಚು ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಕ್ವಾ ಜಿಲ್ಲೆಯ ನೈಜೆರ್‌ನಲ್ಲಿ ಅವಘಡ ಸಂಭವಿಸಿದೆ. ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಜೈನಬ್ ಸುಲೈಮಾನ್ ಪ್ರಕಾರ, ಇದುವರೆಗೂ 24 ಶವಗಳನ್ನು ಹೊರ ತೆಗೆಯಲಾಗಿದೆ. 30 ಜನರನ್ನು ರಕ್ಷಿಸಲಾಗಿದೆ. ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆದಿದೆ.

ದೋಣಿಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಜನರನ್ನು ಕರೆದೊಯ್ಯುತ್ತಿದ್ದುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮೂರು ತಿಂಗಳ ಹಿಂದೆಯೂ ನೈಜಿರಿಯಾದಲ್ಲಿ ದೋಣಿ ಅವಘಡ ಸಂಭವಿಸಿತ್ತು. ಆಗ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.