ಜಕಾರ್ತ, ಇಂಡೊನೇಷ್ಯಾ: ವ್ಯಭಿಚಾರವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ತಿದ್ದುಪಡಿ ಮಸೂದೆಗೆ ಇಂಡೊನೇಷ್ಯಾ ಸಂಸತ್ ಮಂಗಳವಾರ ಸರ್ವಾನುಮತದ ಅನುಮೋದನೆ ನೀಡಿತು.

ವಿವಾಹೇತರ ಲೈಂಗಿಕತೆ ಶಿಕ್ಷಾರ್ಹ ಅಪರಾಧವಾಗಲಿದ್ದು, ಇದು ದೇಶದ ನಾಗರಿಕರಲ್ಲದೇ, ಇಂಡೊನೇಷ್ಯಾಕ್ಕೆ ಭೇಟಿ ನೀಡುವವರಿಗೂ ಅನ್ವಯವಾಗಲಿದೆ.

‘ಸಂಸದೀಯ ಕಾರ್ಯಪಡೆ ನವೆಂಬರ್ನಲ್ಲಿ ಈ ತಿದ್ದುಪಡಿ ಮಸೂದೆಯನ್ನು ಅಂತಿಮಗೊಳಿಸಿತ್ತು. ಸಂಸತ್ನ ಅನುಮೋದನೆ ದೊರೆತಿರುವ ಈ ಮಸೂದೆಗೆ ಅಧ್ಯಕ್ಷರು ಅಂಕಿತ ಹಾಕಬೇಕಿದೆ’ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವ ಎಡ್ವರ್ಡ್ ಹಿರೇಜ್ ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ಹಳೆಯ ಕಾಯ್ದೆಯು ರದ್ದಾಗಿ, ನೂತನ ಕಾಯ್ದೆ ಜಾರಿಗೆ ಬರಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.