ಜಿಸ್ರ್ ಅಲ್–ಶುಘುರ್ (ಸಿರಿಯಾ): ‘ಭಾನುವಾರ ಬೆಳಗ್ಗೆ ವಾಯುವ್ಯ ಸಿರಿಯಾದ ತರಕಾರಿ ಮಾರುಕಟ್ಟೆಯ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಥಮ ಸ್ಪಂದಕರು ತಿಳಿಸಿದ್ದಾರೆ.

‘ಸಿರಿಯಾ ಅಧ್ಯಕ್ಷ ಬಶಾರ್ ಅಸಾದ್ ಅವರ ಮಿತ್ರರಾಷ್ಟ್ರವಾದ ರಷ್ಯಾವು ಟರ್ಕಿ ಗಡಿ ಬಳಿಯ ಪ್ರತಿಪಕ್ಷದ ಹಿಡಿತದಲ್ಲಿರುವ ಜಿಸ್ರ್ ಅಲ್– ಶುಘುರ್ ನಗರದ ಮೇಲೆ ವೈಮಾನಿ ದಾಳಿ ನಡೆಸಿದೆ’ ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ಬ್ರಿಟನ್ ಮೂಲದ ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯ ಮೇಲ್ವಿಚಾರಣೆ ಸಂಸ್ಥೆ ತಿಳಿಸಿದೆ.

ರಷ್ಯಾದ ಖಾಸಗಿ ಪಡೆಯೊಂದು ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ದಂಗೆಯೆದ್ದ ಒಂದು ದಿನದ ಬಳಿಕ ಈ ದಾಳಿ ನಡೆದಿದೆ.

‘ದಾಳಿಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಗಂಭೀರವಾಗಿ ಗಾಯಗೊಂಡವರು ಸಾವಿಗೀಡಾಗುತ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ’ ಎಂದು ಪ್ರತಿಪಕ್ಷದ ಹಿಡಿತದಲ್ಲಿರುವ ಸಿರಿಯಾದ ನಾಗರಿಕ ರಕ್ಷಣಾ ಸಂಸ್ಥೆಯ (ವೈಟ್ ಹೆಲ್ಮೆಟ್ಸ್) ಅಹ್ಮದ್ ಯಾಜಿಜಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.