‘ಮಹಿಳೆಯರು ಹಾಗೂ ಹುಡುಗಿಯರಿಗೆ ತಮ್ಮ ಮನೆಗಳೇ ಸುರಕ್ಷಿತವಲ್ಲ. ಅವರ ಮನೆಗಳೇ ಅವರಿಗೆ ಅತ್ಯಂತ ಅಪಾಯಕಾರಿ ಸ್ಥಳಗಳಾಗಿವೆ’ ಎಂದು ‘ವಿಶ್ವಸಂಸ್ಥೆಯ ಮಾದಕವಸ್ತುಗಳು ಹಾಗೂ ಅಪರಾಧ ಕಚೇರಿ’ ಹಾಗೂ ‘ಯುಎನ್ ಮಹಿಳೆ’ ಸಂಸ್ಥೆಗಳು ಹೇಳಿವೆ. ಈ ಸಂಸ್ಥೆಗಳು ‘ಫೆಮಿಸೈಡ್ಸ್ ಇನ್ 2023’ ವರದಿಯನ್ನು ಬಿಡುಗಡೆ ಮಾಡಿವೆ.

ನವೆಂಬರ್ 25 ಅನ್ನು ‘ಮಹಿಳೆಯರ ಮೇಲಿನ ಹಿಂಸೆ ತಡೆ ದಿನ’ವನ್ನಾಗಿ ಆಚರಿಸಲಾಗುತ್ತಿದೆ. 2024ಕ್ಕೆ ಈ ಆಚರಣೆಗೆ 25 ವರ್ಷಗಳು ಸಂದಿದ್ದು, ಇದೇ ದಿನ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಹೆಣ್ಣುಮಕ್ಕಳ ಹತ್ಯೆಗಳನ್ನು ಅವರದೇ ಸಂಗಾತಿ ಅಥವಾ ಅವರ ಕುಟುಂಬ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ ಎನ್ನುವ ಅಂಶವೂ ಈ ವರದಿ ಮೂಲಕ ಬಹಿರಂಗಗೊಂಡಿದೆ. ‘ಫೆಮಿಸೈಡ್’ ಅಂದರೆ, ಹೆಣ್ಣು ಎನ್ನುವ ಕಾರಣಕ್ಕಾಗಿಯೇ ಮಹಿಳೆಯರನ್ನು ಹಾಗೂ ಹುಡುಗಿಯರನ್ನು ಹತ್ಯೆ ಮಾಡುವುದು. ಇಂಥ ಲಿಂಗ ತಾರತಮ್ಯದ ಮನಃಸ್ಥಿತಿಯ ಕಾರಣಕ್ಕಾಗಿ 2023ರಲ್ಲಿ ಜಗತ್ತಿನಾದ್ಯಂತ ಸುಮಾರು 85,000 ಮಹಿಳೆಯರ ಹತ್ಯೆಯಾಗಿದೆ. ಈ ಸಂಖ್ಯೆಯಲ್ಲಿ ಶೇ 60ರಷ್ಟು ಮಹಿಳೆಯರು ಅಂದರೆ, ಸುಮಾರು 51,100 ಮಹಿಳೆಯರು ಅವರ ಸಂಗಾತಿ/ ಕುಟುಂಬ ಸದಸ್ಯರಿಂದಲೇ ಹತ್ಯೆಯಾಗಿದ್ದಾರೆ.

ಹತ್ಯೆ ತಡೆಯುವ ಮಾರ್ಗ ಯಾವುದು?

ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸಿದ್ದರೆ, ಮಹಿಳೆಯರ ಹಲವು ಹತ್ಯೆ ಪ್ರಕರಣಗಳನ್ನು ತಡೆಯಬಹುದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಫ್ರಾನ್ಸ್, ದಕ್ಷಿಣ ಆಫ್ರಿಕಾ ಹಾಗೂ ಕೊಲಂಬಿಯಾದ ದತ್ತಾಂಶಗಳನ್ನು ಇಟ್ಟುಕೊಂಡು ಹೀಗೆ ಹೇಳಲಾಗಿದೆ. ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹಲವು ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಮಧ್ಯಪ್ರವೇಶಿಸದ ಕಾರಣ ಹತ್ಯೆಗಳು ನಡೆದಿವೆ.

‘ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಬಹುದಾಗಿತ್ತು. ಇದಕ್ಕಾಗಿ ನಾವುಗಳು ನಮ್ಮ ಕಾನೂನನ್ನು ಶಕ್ತಿಯುತವಾಗಿಸಬೇಕಿದೆ. ದತ್ತಾಂಶ ಸಂಗ್ರಹವನ್ನು ಉತ್ತಮ ಪಡಸಿಕೊಳ್ಳಬೇಕು. ಜೊತೆಗೆ ಇಂಥ ಪ್ರಕರಣಗಳಲ್ಲಿ ಸರ್ಕಾರವು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮಹಿಳೆಯರ ಮೇಲಿನ ಹಿಂಸೆಗೆ ‘ಶೂನ್ಯ ಸಹನೆ’ ಧೋರಣೆ ತಳೆಯಬೇಕು. ಮಹಿಳೆಯ ಹಕ್ಕುಗಳ ಸಂಘ–ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ವರದಿಯಲ್ಲಿ ಹೇಳಲಾಗಿದೆ.

ಜಗತ್ತಿನಾದ್ಯಂತ ನಡೆದ ‘ಮೀ ಟೂ’ ಅಭಿಯಾನವು ಮಹಿಳೆಯರ ಮೇಲಿನ ಹಿಂಸೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನೆರವಾಯಿತು. ಇದರಿಂದ ಸಾರ್ವಜನಿಕ ಅಭಿಪ್ರಾಯವೂ ರೂಪುಗೊಂಡಿತು ಎಂದು ಹೇಳಲಾಗಿದೆ. ಲಿಂಗ ತಾರತಮ್ಯವನ್ನು ವಿರೋಧಿಸಿ ಜಗತ್ತಿನಾದ್ಯಂತ #ನೋಎಕ್ಸ್ಕ್ಯೂಸ್ ಮತ್ತು #16ಡೇಸ್ ಎನ್ನುವ 16 ದಿನಗಳ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.