ವಾಷಿಂಗ್ಟನ್ : ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಅವರ ಪ್ರವಾಸದ ಅವಧಿಯಲ್ಲಿಯೇ ಕೆಲ ಸಂಸದರು, ಮಾನವಹಕ್ಕುಗಳ ಹೋರಾಟಗಾರರು ಕಳವಳ ವ್ಯಕ್ತಪಡಿಸಿದರು.

ಡೆಮಾಕ್ರಟಿಕ್ ಪಕ್ಷದ ಸದಸ್ಯರಾದ ಒಕಾಸಿಯೊ ಕಾರ್ಟೆಜ್, ಇಲ್ಹಾನ್ ಓಮರ್, ರಷಿದಾ ತಾಯಿಬ್ ಅವರು, ಪ್ರಜಾಪ್ರಭುತ್ವ ಕಡೆಗಣಿಸುವ ಕ್ರಮವನ್ನು ಖಂಡಿಸಿ ತಾವು, ಅಮೆರಿಕ ಸಂಸತ್ತಿನಲ್ಲಿನ ಮೋದಿ ಭಾಷಣವನ್ನು ಬಹಿಷ್ಕರಿಸುವುದಾಗಿ ಪ್ರಕಟಿಸಿದರು.

ಪಕ್ಷದ ನನ್ನ ಸಹಸದಸ್ಯರು ಬಹುತ್ವ, ಸಹಿಷ್ಣುತೆ, ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ನನ್ನ ಜೊತೆಗೆ ನಿಲ್ಲಬೇಕು ಎಂದು ಭಾವಿಸುತ್ತೇನೆ ಎಂದು ಒಕಾಸಿಯೊ ಕಾರ್ಟೆಜ್ ಅವರು ಟ್ವೀಟ್ ಮಾಡಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ಕಡೆಗಣನೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಮೋದಿ ಅವರ ಜೊತೆಗೆ ಪ್ರಸ್ತಾಪ ಮಾಡಬೇಕು ಎಂದು ಅಧ್ಯಕ್ಷ ಜೋ ಬೈಡನ್ ಮೇಲೂ ಒತ್ತಡ ಹೇರಲಾಗಿತ್ತು.

ಮಾಧ್ಯಮ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಇತರೆ ವಿಷಯಗಳ ಕುರಿತು ಬೈಡನ್ ಅವರು ಗೌರವಯುತ ಮಾರ್ಗದಲ್ಲಿಯೇ ಮೋದಿ ಗಮನಕ್ಕೆ ತರಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿಯೊಬ್ಬರು ತಿಳಿಸಿದರು.

ಮೋದಿ ಪ್ರವಾಸದ ವೇಳೆ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದ ಸಂಘಟನೆಯೊಂದು, ಈ ಅಂಶಗಳ ಬಗ್ಗೆ ಬಹಿರಂಗವಾಗಿಯೇ ಮೋದಿ ಅವರ ಗಮನಸೆಳೆಯಬೇಕು ಎಂದು ಆಗ್ರಹಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.