ಬೀಜಿಂಗ್: ಬೀಜಿಂಗ್ ಸುತ್ತಲ ಜಿಲ್ಲೆಗಳಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಸೋಂಕು ಪ್ರಸರಣೆಯನ್ನು ತಡೆಯಲು ಅಧಿಕಾರಿಗಳು ರಾಜಧಾನಿಯಲ್ಲಿ ಅಂಗಡಿಗಳಿಗೆ ಬಾಗಿಲು ಹಾಕಿಸುತ್ತಿದ್ದಾರೆ. ಮಾಲ್ಗಳನ್ನು ಮುಚ್ಚಿಸುತ್ತಿದ್ದಾರೆ. ವಸತಿ ಪ್ರದೇಶಗಳನ್ನು ನಿರ್ಬಂಧಿಸುತ್ತಿದ್ದಾರೆ.

ಸ್ಥಳೀಯ ಲಾಕ್ಡೌನ್, ಸಾಮೂಹಿಕ ಪರೀಕ್ಷೆ ಮತ್ತು ಪ್ರಯಾಣ ನಿರ್ಬಂಧಗಳ ಮೂಲಕ ಚೀನಾವು ಈಗಾಗಲೇ ಕೊರೊನಾ ವೈರಸ್ನ ಪ್ರಸರಣವನ್ನು ನಿಗ್ರಹಿಸಿದೆ. ಆದರೆ ದೇಶಿಯ ಪ್ರಯಾಣದ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿದ್ದು, ಅಧಿಕಾರಿಗಳು ಹೆಚ್ಚು ಜಾಗೃತರಾಗಿದ್ದಾರೆ.

ಬೀಜಿಂಗ್ನ ಕೇಂದ್ರ ಜಿಲ್ಲೆಗಳಾದ ಚಾಯಾಂಗ್ ಮತ್ತು ಹೈಡಿಯನ್ನಲ್ಲಿ ಗುರುವಾರ ಬೆಳಿಗ್ಗೆ ಆರು ಹೊಸ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈ ಪ್ರಕರಣಗಳೆಲ್ಲವೂ ಇತ್ತೀಚೆಗೆ ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಪತ್ತೆಯಾಗಿದ್ದ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರು, ಅವರ ಸಂಪರ್ಕಕ್ಕೆ ಬಂದವರು ಮಾಲ್, ಅಂಗಡಿಗಳಿಗೆ ತೆರಳದಂತೆ ಮಾಡಲು, ವಸತಿ ಪ್ರದೇಶದಿಂದ ಜನ ಹೊರ ಬರಬಾರದಂತೆ ತಡೆಯಲು ಸ್ಥಳೀಯಾಡಳಿತಗಳು ಬಿಗಿ ಕ್ರಮ ಕೈಗೊಂಡಿವೆ.

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 61 ಪ್ರಕರಣಗಳು ಪತ್ತೆಯಾಗಿವೆ. ಈ ವರೆಗೆ ಅಲ್ಲಿ 5697 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.