ಬೊಯ್ಸ್, ಇದಾಹೊ: ಇದಾಹೊ ತೋಳಗಳನ್ನು ಕೊಲ್ಲಲು ಗುತ್ತಿಗೆದಾರರ ನೇಮಕಕ್ಕೆ ಅನುಮತಿ ನೀಡುವ ಮಸೂದೆಗೆ ಉತ್ತರ ಅಮೆರಿಕದ ಇದಾಹೊ ಸಂಸತ್ ಅನುಮೋದನೆ ನೀಡಿದೆ.

ಈ ಕಾಯ್ದೆ ಜಾರಿಗೆ ಬಂದರೆ, ಇದಾಹೊ ತೋಳಗಳ ಸಂಖ್ಯೆ ಶೇ 90ರಷ್ಟು ಕಡಿಮೆಯಾಗಲಿದೆ

ಸಂಸತ್‌ನಲ್ಲಿ ಮಂಡನೆಯಾದ ಈ ಮಸೂದೆಯನ್ನು 58–11 ಮತಗಳಿಂದ ಅಂಗೀಕರಿಸಲಾಯಿತು. ನಂತರ ಈ ಮಸೂದೆಯನ್ನು ಅನುಮೋದನೆಗಾಗಿ ಗವರ್ನರ್ ಬ್ರ್ಯಾಡ್ ಲಿಟಲ್ ಅವರಿಗೆ ಕಳುಹಿಸಲಾಗಿದೆ.

ಈಗ ಇದಾಹೊ ತೋಗಳಗಳ ಸಂಖ್ಯೆ 1,500 ಅಧಿಕ ಇದೆ. ಅವುಗಳನ್ನು ಕೊಲ್ಲಲು ಅನುವು ಮಾಡಿಕೊಡುವ ಶಾಸನ ಜಾರಿಗೊಂಡರೆ, ಅವುಗಳ ಸಂಖ್ಯೆ 150ಕ್ಕೆ ಇಳಿಯುವುದು. ಇದರಿಂದ ಹಸು, ಕುರಿ ಹಾಗೂ ಇತರ ವನ್ಯಮೃಗಗಳ ಮೇಲೆ ನಡೆಯುತ್ತಿದ್ದ ತೋಳಗಳ ದಾಳಿ ತಪ್ಪಲಿದೆ ಎಂದು ಈ ಮಸೂದೆಯನ್ನು ಬೆಂಬಲಿಸುವ ಸಂಸದರು ಹೇಳಿದರು.

‘ಈ ತೋಳಗಳು ಕಡವೆ, ಜಿಂಕೆ ಹಾಗೂ ದನಗಾಹಿಗಳ ಮೇಲೆ ದಾಳಿ ಮಾಡುತ್ತಿದ್ದವು. ನೂತನ ಕಾಯ್ದೆಯು ತೋಳಗಳ ಸಂಖ್ಯೆಯನ್ನು ನಿಯಂತ್ರಿಸಲು ತೋಳಗಳ ನಿಯಂತ್ರಣ ಮಂಡಳಿಗೆ ಅಧಿಕಾರ ನೀಡುವುದು’ ಎಂದು ಸದನದ ನಾಯಕ ಮೈಕ್ ಮೊಯ್ಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.