ಬ್ಲೈ(ಅಮೆರಿಕ): ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ತೀವ್ರಗೊಳ್ಳುತ್ತಿದ್ದು, ಶನಿವಾರ ಹಲವಾರು ಮನೆಗಳು ಬೆಂಕಿಗೆ ಆಹುತಿಯಾಗಿವೆ.

‘ಜುಲೈ 14ರಂದು ಇಂಡಿಯನ್ ಫಾಲ್ಸ್ ಬಳಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು ಈಗಾಗಲೇ ಹಲವಾರು ಮನೆಗಳು, ಆಸ್ತಿಗಳಿಗೆ ಹಾನಿ ಉಂಟು ಮಾಡಿದೆ. ಸದ್ಯ ಕಾಳ್ಗಿಚ್ಚು ಪೂರ್ವ ದಿಕ್ಕಿನತ್ತ ಹರಡುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ’ ಎಂದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಈ ಕಾಳ್ಗಿಚ್ಚಿನಿಂದಾಗಿ ಪ್ಲುಮಾಸ್ ಮತ್ತು ಬುಟೆ ಕೌಂಟಿಯಲ್ಲಿ 1,81,000 ಎಕರೆ ಪ್ರದೇಶ ನಾಶವಾಗಿದೆ. ಅಲ್ಮಾನೋ ಸರೋವರದ ಪಶ್ಚಿಮ ತೀರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಶನಿವಾರ ರಾತ್ರಿ ವೇಳೆಗೆ ಬೆಂಕಿಯು ಶೇಕಡ 20ರಷ್ಟಿತ್ತು’ ಎಂದು ಅವರು ಹೇಳಿದರು.

‘ಇನ್ನೊಂದೆಡೆ ದಕ್ಷಿಣ ಒರೆಗಾನ್‌ನಲ್ಲಿ ಕಾಣಿಸಿಕೊಂಡ ದೇಶದ ಅತಿ ದೊಡ್ಡಕಾಳ್ಗಿಚ್ಚು ಶನಿವಾರ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿದೆ. 2,200 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಗಾಳಿಯಿಂದಾಗಿ ಬೆಂಕಿ ಇನ್ನಷ್ಟು ತೀವ್ರಗೊಳ್ಳುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.