ಅಂಕಾರ: ಸೌದಿ ಅರೇಬಿಯಾದ ಕಾನ್ಸುಲ್ ಕಚೇರಿಯಲ್ಲಿ ಹತ್ಯೆಯಾದ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಮೃತದೇಹದ ಭಾಗಗಳನ್ನು ಸಾಗಿಸಿದ ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಟರ್ಕಿಯ ವಾಹಿನಿಯೊಂದು ಪ್ರಸಾರ ಮಾಡಿದೆ.

ಮೂವರು ವ್ಯಕ್ತಿಗಳು ಐದು ಸೂಟ್ಕೇಸ್ ಮತ್ತು ಎರಡು ದೊಡ್ಡ ಕಪ್ಪು ಬ್ಯಾಗುಗಳಲ್ಲಿ ಸೌದಿ ಕಾನ್ಸುಲ್ ಜನರಲ್ ಮನೆಯ ಕಡೆಗೆ ಸಾಗಿಸುತ್ತಿದ್ದ ದೃಶ್ಯಗಳನ್ನು ಎ– ಹಬರ್ ವಾಹಿನಿ ಪ್ರಸಾರ ಮಾಡಿದೆ.

ಕಾನ್ಸುಲ್ ಜನರಲ್ ಮನೆ ಮತ್ತು ಸೌದಿ ಕಾನ್ಸುಲ್ ಕಚೇರಿ ನಡುವೆ ಸ್ವಲ್ಪವೇ ಅಂತರವಿದೆ.

ವಾಷಿಂಗ್ಟನ್ ಪೋಸ್ಟ್ ಅಂಕಣಕಾರರಾಗಿದ್ದ ಖಶೋಗ್ಗಿ ಅವರನ್ನು ಅಕ್ಟೋಬ್ 2 ರಂದು ಹತ್ಯೆ ಮಾಡಲಾಗಿತ್ತು. ಯೆಮನ್ ನಾಗರಿಕರ ಮೇಲೆ ಸೌದಿ ನಡೆಸುತ್ತಿರುವ ಯುದ್ಧ ಸೇರಿದಂತೆ ಸೌದಿ ರಾಜಕುಮಾರರ ನಡೆಯನ್ನು ಜಮಾಲ್ ತಮ್ಮ ಅಂಕಣದಲ್ಲಿ ತೀವ್ರವಾಗಿ ಟೀಕಿಸಿ ಬರೆಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.