ಬೀಜಿಂಗ್: ಚೀನಾ ರಾಜಧಾನಿ ಬೀಜಿಂಗ್ ಸೇರಿದಂತೆ ಹಲವು ನಗರಗಳಲ್ಲಿ ಮಂಗಳವಾರ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಸುಮಾರು 19 ಲಕ್ಷ ಜನಸಂಖ್ಯೆ ಇರುವಗ್ವಾಂಗ್ಝೌ ನಗರದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 5,000 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೀಜಿಂಗ್ನಲ್ಲಿ ಸೋಮವಾರ 462 ಪ್ರಕರಣಗಳು ಪತ್ತೆಯಾಗಿವೆ. ಏಪ್ರಿಲ್ ನಂತರ ಚೋಂಗ್ಕಿಂಗ್ ಮತ್ತು ಝೆಂಗ್ಝೌ ನಗರಗಳು ಕೊರೊನಾ ಸೋಂಕಿನಿಂದ ತತ್ತರಿಸುತ್ತಿವೆ.

ನ.14ರ ಸೋಮವಾರ ಚೀನಾದಾದ್ಯಂತ ಒಟ್ಟು 17,772 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೂ ಮುನ್ನಾ ದಿನ 16,072 ಪ್ರಕರಣಗಳು ದೃಢಪಟ್ಟಿದ್ದವು.

ನಿರ್ಬಂಧ ಸಡಿಲ:ಕೋವಿಡ್ ನಿರ್ಬಂಧ ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾರಣ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಹಲವು ನಗರಗಳಲ್ಲಿಚೀನಾ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತಿದೆ. ಹಲವೆಡೆಪರೀಕ್ಷಾ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಇನ್ನೊಂದೆಡೆ ಕೆಲಸ ಮಾಡುವ ಸ್ಥಳಗಳಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರಗಳನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಕೋವಿಡ್ ಪರೀಕ್ಷಾ ಕೇಂದ್ರಗಳೇ ಸಮರ್ಪಕವಾಗಿ ಲಭ್ಯವಿಲ್ಲದೆ ನೆಗೆಟಿವ್ ಪ್ರಮಾಣ ಪತ್ರ ಕೊಂಡೊಯ್ಯುವುದು ಹೇಗೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೇಶದಲ್ಲಿ ಲಾಕ್ಡೌನ್ ಪೂರ್ಣ ರದ್ದು ಮಾಡುವ ಮೊದಲು ಸಾಮೂಹಿಕವಾಗಿ ಲಸಿಕೆ ಹಾಕಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.